ಕರ್ನಾಟಕ

karnataka

ETV Bharat / bharat

ನ್ಯಾಯಸಮ್ಮತವಲ್ಲದ ಕೋವಿಡ್-19 ಚಿಕಿತ್ಸಾ ವಿಧಾನ ವೈರಸ್ ರೂಪಾಂತರಕ್ಕೆ ಕಾರಣ : ಐಸಿಎಂಆರ್ - ಕೋವಿಡ್ ವೈರಸ್ ರೂಪಾಂತ

ವೈರಸ್ ಮೇಲಿನ ಪ್ರತಿರಕ್ಷಣಾ ಒತ್ತಡವು ಪರಿಸರಕ್ಕೆ ಸಂಬಂಧಿಸಿರಬಹುದು. ಆದರೆ, ಇದು ಚಿಕಿತ್ಸೆಗೆ ಹೆಚ್ಚು ಸಂಬಂಧಿಸಿದೆ ಅಥವಾ ವೈರಸ್ ಮೇಲೆ ಈ ರೋಗನಿರೋಧಕ ಒತ್ತಡ ಉಂಟು ಮಾಡುವ ಇತರ ವಿಧಾನಗಳಿಗೆ ಸಂಬಂಧಿಸಿದೆ..

Non-judicious use of therapies for COVID-19 leads to virus mutations
ವೈರಸ್ ರೂಪಾಂತರಕ್ಕೆ ಕಾರಣ

By

Published : Dec 30, 2020, 7:52 AM IST

ನವದೆಹಲಿ :ನ್ಯಾಯಸಮ್ಮತವಲ್ಲದ ಕೋವಿಡ್ -19 ಚಿಕಿತ್ಸಾ ವಿಧಾನ "ವೈರಸ್ ಮೇಲೆ ರೋಗನಿರೋಧಕ ಒತ್ತಡವನ್ನು" ಉಂಟು ಮಾಡಲು ಕಾರಣವಾಗಿದೆ ಮತ್ತು ವೈರಸ್ ರೂಪಾಂತರಗಳಿಗೆ ಕಾರಣವಾಗುತ್ತದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಭಾರ್ಗವ ಹೇಳಿದ್ದಾರೆ.

"ಆ್ಯಂಟಿ-ವೈರಲ್" ಅಥವಾ "ಆ್ಯಂಟಿ-ಕೋವಿಡ್ ಥೆರಪಿಗಳು" ಎಂದು ಕರೆಯಲ್ಪಡುವ ಚಿಕಿತ್ಸೆಗಳು ಮತ್ತು ಅವುಗಳಿಗೆ ವೈಜ್ಞಾನಿಕ ಸಂಶೋಧನಾ ಪ್ರಬಂಧದಲ್ಲಿ ಸ್ಥಾಪಿಸಲಾದ ಪ್ರಯೋಜನಗಳಿಲ್ಲ. ಈ ಚಿಕಿತ್ಸೆಯನ್ನು ಬಳಸಬಾರದು. ಯಾಕೆಂದರೆ, ಅವು ವೈರಸ್ ಮೇಲೆ ಭಾರಿ ಪ್ರತಿರಕ್ಷಣಾ ಒತ್ತಡ ಬೀರುತ್ತವೆ. ಇದರಿಂದ ವೈರಸ್ ಹೆಚ್ಚು ರೂಪಾಂತರಗೊಳ್ಳುತ್ತದೆ ಎಂದು ಡಾ. ಭಾರ್ಗವ ತಿಳಿಸಿದ್ದಾರೆ.

ಬ್ರಿಟನ್​​ನಲ್ಲಿ ಕಾಣಿಸಿರುವ ರೂಪಾಂತರ ಕೊರೊನಾ ವೈರಸ್​​​​ ಕುರಿತು ಮಾತನಾಡಿದ ಡಾ. ಭಾರ್ಗವ ಅವರು, ಉಸಿರಾಟದ ವೈರಸ್‌ಗಳಲ್ಲಿ ಆನುವಂಶಿಕ ರೂಪಾಂತರಗಳು ಸಂಭವಿಸುತ್ತವೆ. ಆದರೆ, ಹೆಚ್ಚಿನ ಹರಡುವಿಕೆಯು ಕಳವಳಕಾರಿ ಎಂದಿದ್ದಾರೆ.

"ಉಸಿರಾಟದ ವೈರಸ್‌ಗಳಲ್ಲಿ ಆನುವಂಶಿಕ ರೂಪಾಂತರಗಳು ಸಂಭವಿಸುತ್ತವೆ ಮತ್ತು ಈ ಸಣ್ಣ ಬದಲಾವಣೆಗಳು ಕಾಲಕಾಲಕ್ಕೆ ಸಂಭವಿಸಬಹುದು. ಆದರೆ, ಹಲವಾರು ಬದಲಾವಣೆಗಳು ಸಂಭವಿಸಿದಲ್ಲಿ ಬ್ರಿಟನ್​ನಲ್ಲಿ ಸಂಭವಿಸಿದಂತೆ ಹೆಚ್ಚಿನ ಪ್ರಸರಣ ಪ್ರಮಾಣ ಹೊಂದಿರುತ್ತದೆ. ಆದ್ದರಿಂದ ಭಾರತದಲ್ಲಿ ವೈರಸ್ ರೂಪಾಂತರದ ಬಗ್ಗೆ ನಾವು ನಿಯಮಿತವಾಗಿ ಪರೀಕ್ಷಿಸುತ್ತಿದ್ದರೂ ಇದೊಂದು ಕಳವಳಕಾರಿ ಸಂಗತಿ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಓದಿಕ್ವಾರಂಟೈನ್​ ಕೇಂದ್ರದಿಂದ ತಪ್ಪಿಸಿಕೊಂಡು ಆಂಧ್ರ ಸೇರಿದ ಮಹಿಳೆಯಲ್ಲಿ ರೂಪಾಂತರಿ ಕೊರೊನಾ ವೈರಸ್

ವೈರಸ್ ಮೇಲಿನ ಪ್ರತಿರಕ್ಷಣಾ ಒತ್ತಡವು ಪರಿಸರಕ್ಕೆ ಸಂಬಂಧಿಸಿರಬಹುದು. ಆದರೆ, ಇದು ಚಿಕಿತ್ಸೆಗೆ ಹೆಚ್ಚು ಸಂಬಂಧಿಸಿದೆ ಅಥವಾ ವೈರಸ್ ಮೇಲೆ ಈ ರೋಗನಿರೋಧಕ ಒತ್ತಡ ಉಂಟು ಮಾಡುವ ಇತರ ವಿಧಾನಗಳಿಗೆ ಸಂಬಂಧಿಸಿದೆ.

"ಆದ್ದರಿಂದ ನಮ್ಮ ವೈಜ್ಞಾನಿಕ ಸಮುದಾಯ ವೈರಸ್ ಮೇಲೆ ಹೆಚ್ಚು ರೋಗನಿರೋಧಕ ಒತ್ತಡವನ್ನು ಬೀರದ ಮತ್ತು ಪ್ರಯೋಜನವಾಗಲಿರುವ ಸುಸ್ಥಾಪಿತ ಚಿಕಿತ್ಸಾ ವಿಧಾನಗಳ ನ್ಯಾಯಯುತ ಬಳಕೆ ಕಾಪಾಡಿಕೊಳ್ಳಬೇಕು.

ಚಿಕಿತ್ಸೆಗಳು ಪ್ರಯೋಜನವನ್ನು ಸ್ಥಾಪಿಸದಿದ್ದರೆ, ನಾವು ಅದನ್ನು ಬಳಸಬಾರದು. ಇಲ್ಲದಿದ್ದರೆ ಆ ವಿಧಾನ ವೈರಸ್ ಮೇಲೆ ವಿಪರೀತ ರೋಗನಿರೋಧಕ ಒತ್ತಡ ಬೀರುತ್ತದೆ ಮತ್ತು ಹೆಚ್ಚು ರೂಪಾಂತರಗೊಳ್ಳುತ್ತದೆ" ಎಂದು ಹೇಳಿದ್ದಾರೆ.

ABOUT THE AUTHOR

...view details