ನೋಯ್ಡಾ (ಉತ್ತರ ಪ್ರದೇಶ ) : ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆಯೇ ನೋಯ್ಡಾ ಮೆಟ್ರೋ ರೈಲು ನಿಗಮ (ಎನ್‌ಎಂಆರ್‌ಸಿ) ಒಂದು ವಿಶಿಷ್ಟ ನಿಯಮವನ್ನು ಜಾರಿಗೆ ತಂದಿದೆ.
ತೃತೀಯ ಲಿಂಗಿಯರಿಗೆ ನೋಯ್ಡಾದ ಸೆಕ್ಟರ್ 50 ಮೆಟ್ರೋ ನಿಲ್ದಾಣ ಮೀಸಲು - metro station to be dedicated for transgender in Noida
ನೋಯ್ಡಾ ಮೆಟ್ರೋ ರೈಲು ನಿಗಮ (ಎನ್‌ಎಂಆರ್‌ಸಿ) ನಗರದ ನಿಲ್ದಾಣವೊಂದನ್ನು ತೃತೀಯ ಲಿಂಗಿಯರಿಗಾಗಿ ಮೀಸಲಿಡುವ ಮೂಲಕ ಗಮನ ಸೆಳೆದಿದೆ.
ಮೆಟ್ರೋ ನಿಲ್ದಾಣ ತೃತೀಯ ಲಿಂಗಿಯರಿಗೆ ಮೀಸಲಿಟ್ಟ ಎನ್‌ಎಂಆರ್‌ಸಿ
ಎನ್‌ಎಂಆರ್‌ಸಿಯ ಸೆಕ್ಟರ್ 50 ನಿಲ್ದಾಣವನ್ನು ತೃತೀಯ ಲಿಂಗಿಯರಿಗಾಗಿ ಮೀಸಲಿಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೋಯ್ಡಾ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ರಿತು ಮಹೇಶ್ವರಿ, ತೃತೀಯ ಲಿಂಗಿಯರಿಗೆ ಈ ನಿಲ್ದಾಣದಲ್ಲಿ ಉದ್ಯೋಗ ನೀಡಲಾಗುವುದು. ಎಲ್ಲ ಪ್ರಯಾಣಿಕರಿಗೆ ನಿಲ್ದಾಣವು ತೆರೆದಿರುತ್ತದೆ ಎಂದು ಹೇಳಿದ್ದಾರೆ.