ನೋಯ್ಡಾ (ಉತ್ತರ ಪ್ರದೇಶ):ಕಾಲೇಜಿಗೆ ಎರಡು ದಿನ ರಜೆ ಘೋಷಿಸಿ ಆದೇಶ ನೀಡಿರುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಅವರ ಸಹಿಯನ್ನು ಫೋರ್ಜರಿ(ನಕಲು) ಮಾಡಿದ ಆರೋಪದ ಮೇಲೆ 12ನೇ ತರಗತಿಯ ವಿದ್ಯಾರ್ಥಿಗಳಿಬ್ಬರ ವಿರುದ್ಧ ನೋಯ್ಡಾ ಪೊಲೀಸರು FIR ದಾಖಲಿಸಿದ್ದಾರೆ.
ಕಾಲೇಜಿಗೆ 2 ದಿನ ರಜೆ ಘೋಷಿಸಿರುವಂತೆ ಮ್ಯಾಜಿಸ್ಟ್ರೇಟ್ ಸಹಿ ಫೋರ್ಜರಿ: ವಿದ್ಯಾರ್ಥಿಗಳ ವಿರುದ್ಧ FIR - Noida District Magistrate BN Singh latest news
ಕಾಲೇಜಿಗೆ ಎರಡು ದಿನ ರಜೆ ಘೋಷಿಸಿರುವಂತೆ ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಸಹಿ ಫೋರ್ಜರಿ ಮಾಡಿದ ವಿದ್ಯಾರ್ಥಿಗಳಿಬ್ಬರ ವಿರುದ್ಧ FIR ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ ಎನ್ ಸಿಂಗ್ ಅವರು ಡಿ.23 ಹಾಗೂ 24 ರಂದು ನಾನು ಕಾಲೇಜಿಗೆ ರಜೆ ಘೋಷಿಸಿರುವಂತೆ ನನ್ನ ಸಹಿಯನ್ನು ನಕಲು ಮಾಡಲಾಗಿರುವ ವಿಷಯ ತಿಳಿದಿದ್ದು, ತಕ್ಷಣವೇ FIR ದಾಖಲಿಸಲಾಗಿತ್ತು. ಘಟನೆ ಬೆಳಕಿಗೆ ಬಂದ14 ಗಂಟೆಯೊಳಗಾಗಿ ನೋಯ್ಡಾ ಪೊಲೀಸರು ಫೋರ್ಜರಿ ಮಾಡಿದ 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ. ಆದರೆ FIR ದಾಖಲಾಗಿದ್ದ ಕಾರಣ ಅವರನ್ನು ಬಾಲಾಪರಾಧಿಗಳ ನ್ಯಾಯ ಮಂಡಳಿಗೆ ಕಳುಹಿಸಲಾಗಿತ್ತು. ಆ ಬಳಿಕ ಅವರಿಗೆ ಜಾಮೀನು ಸಿಕ್ಕಿದೆ ಎಂದು ಬಿ ಎನ್ ಸಿಂಗ್ ಹೇಳಿದರು.