ಕರ್ನಾಟಕ

karnataka

ETV Bharat / bharat

ಮೋದಿ ಭಾರತವನ್ನ ಯಾರೂ ದಿಟ್ಟಿಸಿಯೂ ನೋಡಲಾರರು: ರಾಹುಲ್​​ಗೆ ಪ್ರಸಾದ ತಿರುಗೇಟು - ರಾಹುಲ್​ ಗಾಂಧಿ

ಮೋದಿಯವರ ಭಾರತವನ್ನು ಯಾರೂ ದಿಟ್ಟಿಸಿ ನೋಡಲಾಗುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

By

Published : May 27, 2020, 4:59 PM IST

ನವದೆಹಲಿ: ಚೀನಾ- ಭಾರತ ಗಡಿಯ ಪೂರ್ವ ಲಡಾಕ್​​ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಆದ್ರೆ ನರೇಂದ್ರ ಮೋದಿಯ ಭಾರತಕ್ಕೆ ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​​ ಬುಧವಾರ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ, ಅವರಿಗೆ ಚೀನಾ ಗಡಿಯಲ್ಲಿ ಖ್ಯಾತೆ ತೆಗೆದಿರುವುದರ ಬಗ್ಗೆ ಪ್ರಶ್ನಿಸಿದಾಗ, "ಮೋದಿಯವರ ಭಾರತವನ್ನು ದಿಟ್ಟಿಸಲು ಯಾರೂ ಧೈರ್ಯ ಮಾಡಲಾರರು." ಎಂದರು.

ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್

ಲಡಾಕ್ ಮತ್ತು ಸಿಕ್ಕಿಂನ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ರಾಹುಲ್​ ಗಾಂಧಿ ಆಗ್ರಹಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ರವಿಶಂಕರ್​ ಪ್ರಸಾದ್​​ ನಿರಾಕರಿಸಿದ್ರು. ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​ ಅವರು ಮಂಗಳವಾರ ಮಿಲಿಟರಿ ಪಡೆಗೆ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದರು.

ವರದಿಗಳ ಪ್ರಕಾರ, ಮೇ. 5 ರಂದು ಲಡಾಖ್‌ನ ಪಾಂಗೊಂಗ್ ಸರೋವರದ ಉತ್ತರದ ದಂಡೆಯಲ್ಲಿ ಭಾರತೀಯ ಮತ್ತು ಚೀನಾದ ಸೇನಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ನಾಲ್ಕು ದಿನಗಳ ನಂತರ ಸಿಕ್ಕಿಂನ ನಕು ಲಾ ಪಾಸ್ ಬಳಿ ಎರಡೂ ದೇಶದ ಸೈನಿಕರು ಮುಖಾಮುಖಿಯಾಗಿದ್ದರು.

ABOUT THE AUTHOR

...view details