ಕರ್ನಾಟಕ

karnataka

ETV Bharat / bharat

ಮಾಧ್ಯಮಗಳ ಯುದ್ಧೋತ್ಸಾಹ... ಇವರಿಗಿಲ್ಲವೇ ತಿದ್ದಿಬುದ್ಧಿ ಹೇಳೋರು: 'ನೊಬೆಲ್ ಪುರಸ್ಕೃತ'ರ ರೋಷಾವೇಶ - undefined

ಇಂಡೋ- ಪಾಕ್​ ನಡುವೆ ಇತ್ತೀಚೆಗೆ ನಡೆದ ವಿದ್ಯಾಮಾನಗಳನ್ನು ಭಾರತದ ಮಾಧ್ಯಮಗಳು 'ಯುದ್ಧ ವ್ಯಾಪಾರೀಕರಣ'ದತ್ತ (ವಾರ್​ ಮೊಂಗೇರಿಂಗ್: war-mongering​) ತೆಗೆದುಕೊಂಡು ಹೋಗಿವೆ: ಕೈಲಾಶ್ ಸತ್ಯಾರ್ಥಿ

Nobel

By

Published : Mar 12, 2019, 3:34 PM IST

ಪ್ಯಾರಿಸ್​: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ವಾಯುಪಡೆಯ ಏರ್​ಸ್ಟ್ರೈಕ್​ ಬಳಿಕ ಉಂಟಾದ ಭಾರತ- ಪಾಕ್​ ನಡುವಿನ ಯುದ್ಧ ಉದ್ವಿಗ್ನತೆಯ ಸಂದರ್ಭದಲ್ಲಿನ ಭಾರತೀಯ ಮಾಧ್ಯಮಗಳ ನಡೆ ಕುರಿತು ನೊಬೆಲ್​ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಕಿಡಿ ಕಾರಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇಂಡೋ- ಪಾಕ್​ ನಡುವೆ ಇತ್ತೀಚೆಗೆ ನಡೆದ ವಿದ್ಯಾಮಾನಗಳನ್ನು ಭಾರತದ ಮಾಧ್ಯಮಗಳು 'ಯುದ್ಧ ವ್ಯಾಪಾರೀಕರಣ'ದತ್ತ (ವಾರ್​ ಮೊಂಗೇರಿಂಗ್: war-mongering​) ತೆಗೆದುಕೊಂಡು ಹೋಗಿವೆ. ಇದು ರಾಷ್ಟ್ರಕ್ಕೆ ಅಪಾಯಕಾರಿಯಾದ ನಡೆ ಎಂದು ಎಚ್ಚರಿಸಿದರು.

1999ರ ಯುದ್ಧದ ಬಿಕ್ಕಟ್ಟಿನ ನಂತರ ಉಭಯ ದೇಶಗಳ ಮುಖಾಮುಖಿಯು 'ಶಾಂತಿಯುತವಾಗಿತ್ತು'. ಆದರೆ, ಈಗಿನ ತೀವ್ರ ರಾಷ್ಟ್ರೀಯತೆ ಅಪಾಯದ ಕುರಿತು ನಾವು ಎಚ್ಚರ ವಹಿಸಬೇಕಿದೆ ಎಂದರು.

ಜನಸಾಮಾನ್ಯರು, ರಾಷ್ಟ್ರೀಯವಾದಿಗಳಿಂದ ಹಿಡಿದು ಮಾಧ್ಯಮ ಕ್ಷೇತ್ರದವರು ಒಳಗೊಂಡು ಎಲ್ಲರೂ ಪಾಕ್​ನೊಂದಿಗೆ ಯುದ್ಧ ಮಾಡಲೇಬೇಕು ಎಂಬ ವಾದ ಸರ್ಕಾರದ ಮುಂದಿಟ್ಟರು. ಯುದ್ಧದಂತಹ ಸಂದರ್ಭಗಳನ್ನು ಆನಂದಿಸುತ್ತಿರುವುದು ತುಂಬಾ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಅದೃಷ್ಟವಶಾತ್ ಪತ್ರಿಕೋದ್ಯಮ ಮತ್ತು ರಾಜಕಾರಣದಲ್ಲಿ ಕೆಲವರಾದರು ಉತ್ತಮ ವ್ಯಕ್ತಿಗಳಿದ್ದಾರೆ. ಅವರು ಹೆಚ್ಚು ಶ್ರಮವಹಿಸಿ ದುಡಿಯುತ್ತಿದ್ದಾರೆ. ಆದರೆ, ಬಹಳಷ್ಟು ಜನರು ದೇಶ ಪ್ರೇಮವನ್ನು ದಾಟಿ 'ಯುದ್ಧ ವ್ಯಾಪಾರೀಕರಣ'ಕ್ಕೆ ಒಕ್ಕೂರಲಿನ ಧ್ವನಿ ಎತ್ತುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಇಂತಹ ನಡೆಯಿಂದ ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಂಡಿತು. ಪಾಕಿಸ್ತಾನದಲ್ಲಿ ಹಿಂಸಾತ್ಮಕ ಉಗ್ರಗಾಮಿತ್ವ ಸಮಸ್ಯೆ ಇನ್ನೂ ಜೀವಂತವಾಗಿದೆ. ಪಾಕ್​ ಸರ್ಕಾರವನ್ನು ಹಿಂಬಾಗಿಲಿನ ಮೂಲಕ ನಿಯಂತ್ರಿಸುತ್ತಿದೆ. ಶಕ್ತಿಶಾಲಿಯಾದ ಸರ್ಕಾರ ಅಲ್ಲಿನ ಭಯೋತ್ಪಾದನೆ ಜತೆಗೆ ಕೆಲಸ ಮಾಡಲಾರದು ಎಂದು ಕೈಲಾಶ್ ಸತ್ಯಾರ್ಥಿ ವಿಶ್ಲೇಷಿಸಿದರು.

For All Latest Updates

TAGGED:

ABOUT THE AUTHOR

...view details