ಕರ್ನಾಟಕ

karnataka

ETV Bharat / bharat

ಜನರ ಮೇಲೆ ದಾಳಿ ಮಾಡಲು 'ಜೈ ಶ್ರೀರಾಮ್' ಬಳಕೆ: ನೊಬೆಲ್ ಪುರಸ್ಕೃತ ಅಮಾರ್ತ್ಯ ಸೇನ್ ಬೇಸರ - undefined

ಈ ಮೊದಲು ನಾನು ಜೈ ಶ್ರೀರಾಮ್ ಎಂಬ ಘೋಷಣೆಯನ್ನೇ ಕೇಳಿರಲಿಲ್ಲ. ಆದರೆ ಇದೀಗ ಜನರ ಮೇಲೆ ದಾಳಿ ಮಾಡಲು ಇದನ್ನು ಬಳಸಲಾಗ್ತಿದೆ. ಇದು ಬಂಗಾಳಿ ಸಂಸ್ಕೃತಿಯೇ ಅಲ್ಲ ಎಂದು ಜಾಧವ್​ಪುರ ವಿವಿಯಲ್ಲಿ ನೊಬೆಲ್​ ಪುರಸ್ಕೃತ ಅಮಾರ್ತ್ಯ ಸೇನ್ ಹೇಳಿದರು.

Amartya Sen

By

Published : Jul 6, 2019, 7:40 AM IST

ಕೋಲ್ಕತ್ತಾ:ಜೈ ಶ್ರೀರಾಮ್ ಎಂಬ ಘೋಷಣೆಯನ್ನು ಈಗೀಗ ಜನರ ಮೇಲೆ ದಾಳಿ ಮಾಡಲೆಂದೇ ಬಳಸಿಕೊಳ್ಳಲಾಗ್ತಿದೆ ಎಂದು ನೊಬೆಲ್​ ಪುರಸ್ಕೃತ ಅಮಾರ್ತ್ಯ ಸೇನ್ ಬೇಸರ ವ್ಯಕ್ತಪಡಿಸಿದರು.

ಈ ಮೊದಲು ನಾನು ಜೈ ಶ್ರೀರಾಮ್ ಎಂಬ ಘೋಷಣೆಯನ್ನೇ ಕೇಳಿರಲಿಲ್ಲ. ಆದರೆ ಇದೀಗ ಜನರ ಮೇಲೆ ದಾಳಿ ಮಾಡಲು ಇದನ್ನು ಬಳಸಲಾಗ್ತಿದೆ. ಇದು ಬಂಗಾಳಿ ಸಂಸ್ಕೃತಿಯೇ ಅಲ್ಲ ಎಂದು ಜಾಧವ್​ಪುರ ವಿವಿಯಲ್ಲಿ ಹೇಳಿದರು.

ಈ ಮೊದಲು ಬಂಗಾಳದಲ್ಲಿ ರಾಮನವಮಿ ಆಚರಣೆಯೂ ಇರಲಿಲ್ಲ. ನನ್ನ ನಾಲ್ಕು ವರ್ಷದ ಮೊಮ್ಮಗುವನ್ನು ಕೇಳಿದಾಗ, ತನ್ನ ನೆಚ್ಚಿನ ದೇವರು ಮಾ ದುರ್ಗಾ ಎಂದು ಹೇಳಿತು. ಮಾ ದುರ್ಗಾ ಮಹತ್ವವನ್ನು ರಾಮನವಮಿಗೆ ಹೋಲಿಸಲು ಸಾಧ್ಯವೇ ಇಲ್ಲ ಎಂದರು.

ಇದೀಗ ಒಂದು ಕೋಮಿನ ಜನರು ಮುಕ್ತವಾಗಿ ಸಂಚರಿಸಲು ಹೆದರುವಂತ ಸ್ಥಿತಿ ನಿರ್ಮಾಣವಾಗಿದೆ ಎಂದೂ ಆತಂಕ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details