ಮುಂಬೈ:ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ಮ್ಯಾನಿಪ್ಯುಲೇಷನ್ ದಂಧೆಯ ಪ್ರಕರಣವನ್ನು ಭೇದಿಸಿದ ಮುಂಬೈ ಪೊಲೀಸರ ಕಾರ್ಯವೈಖರಿಗೆ ಶಿವಸೇನೆ ಮುಖಂಡ ಸಂಜಯ್ ರಾವತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಟಿಆರ್ಪಿ ದಂಧೆಯನ್ನು ಬಯಲು ಮಾಡುವಲ್ಲಿ ಮುಂಬೈ ಪೊಲೀಸರು ತೋರಿದ ಧೈರ್ಯವನ್ನು ಬಣ್ಣಿಸಿರುವ ಸಂಜಯ್ ರಾವತ್, ಇದು ಯಾವುದೇ ರೀತಿಯ ಮತ್ತು ಯಾರ ವಿರುದ್ಧದ ಪ್ರತೀಕಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಆರ್ಪಿ ಹಗರಣವನ್ನು ಜನರ ಮುಂದಿಡಲು ಮುಂಬೈ ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ. ಇದು ಕೇವಲ ಆರಂಭ, ಶೀಘ್ರದಲ್ಲೇ ಎಲ್ಲವೂ ಬಯಲಾಗಲಿದೆ ಎಂದು ಪೊಲೀಸರು ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಮತ್ತಷ್ಟು ಟ್ವಿಸ್ಟ್ ಕೊಟ್ಟರು.
30,000 ಕೋಟಿ ರೂ.ಗಳ ಹಗರಣ ನಡೆದರೂ ಮುಂಬೈ ಜನರು ಶಾಂತವಾಗಿರುವುದೇಕೆ? ಎಂದು ಪ್ರಶ್ನಿಸಿರುವ ಸಂಜಯ್ ರಾವತ್, ಈ ದಂಧೆಯ ಹಿಂದೆ ಯಾರು ಅಡಗಿದ್ದಾರೆ? ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು? ಎಂದು ಕೇಳುವ ಮೂಲಕ ಟಿಆರ್ಪಿ ದಂಧೆ ಕುರಿತು ಕಿಡಿ ಕಾರಿದರು.
ಮುಂಬೈ ಪೊಲೀಸರು ಅವರ ಕೆಲಸ ಅವರು ಮಾಡಿದ್ದಾರೆ. ಅದು ಅವರ ವೃತ್ತಿಪರತೆಯಷ್ಟೇ. ಸೇಡು ಅಥವಾ ಪ್ರತೀಕಾರದಿಂದ ಅವರು ಈ ಕ್ರಮ ಕೈಗೊಂಡಿಲ್ಲ. ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಮತ್ತು ಠಾಕ್ರೆ ಕುಟುಂಬವನ್ನು ಗುರಿಯಾಗಿಸಿಕೊಂಡು ಕೆಲವು ಟಿವಿ ಚಾನೆಲ್ಗಳು ಹೇಗೆ ಬೇಕೋ ಹಾಗೆ ಸುದ್ದಿಗಳನ್ನು ತಿರುಚಿ ಬಿತ್ತರಿಸಿವೆ. ಇದು ಪ್ರತೀಕಾರವಲ್ಲವೇ? ಎಂದು ರಾವತ್ ಪ್ರಶ್ನಿಸಿದ್ದಾರೆ.