ತಿರುಪ್ಪುರ್ (ತಮಿಳುನಾಡು): ಕೊರೊನಾ ಭೀತಿ ಮಧ್ಯೆ ಮದ್ಯ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ತಿರುಪ್ಪುರ್ ಜಿಲ್ಲಾಡಳಿತವು ಐಡಿಯಾವೊಂದನ್ನು ಮಾಡಿದೆ.
ಛತ್ರಿ ಇಲ್ಲದಿದ್ರೆ ಮದ್ಯ ಇಲ್ಲ, ಸಾಮಾಜಿಕ ಅಂತರ ಕಾಪಾಡಲು ಜಿಲ್ಲಾಡಳಿತದ ಐಡಿಯಾ - ತಮಿಳುನಾಡು ಸುದ್ದಿ
ತಮಿಳುನಾಡಿನ ತಿರುಪ್ಪುರ್ ಜಿಲ್ಲಾಡಳಿತ ಕೊಡೆ ಇಲ್ಲದೆ ಬರುವ ಯಾರಿಗೂ ಮದ್ಯ ಸಿಗುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮದ್ಯ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಜಿಲ್ಲಾಡಳಿತ ಈ ಪ್ಲಾನ್ ಮಾಡಿದೆ.
ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳಲ್ಲಿ ಮದ್ಯ ಖರೀದಿಸಲು ಬರುವ ಮದ್ಯಪ್ರಿಯರು ಛತ್ರಿ ತರುವುದು ಕಡ್ಡಾಯ. ಅಲ್ಲದೆ ಛತ್ರಿಯನ್ನು ಬಿಡಿಸಿಯೇ ಕ್ಯೂನಲ್ಲಿ ನಿಲ್ಲಬೇಕು ಎಂದು ತಿರುಪ್ಪುರ್ ಜಿಲ್ಲಾಡಳಿತ ಮಂಗಳವಾರ ತಿಳಿಸಿದೆ. ಛತ್ರಿ ಇಲ್ಲದೆ ಬರುವ ಯಾರಿಗೂ ಮದ್ಯ ಸಿಗುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಛತ್ರಿ ಹಿಡಿದು ಸಾಲಿನಲ್ಲಿ ನಿಲ್ಲುವುದರಿಂದ ಜನರ ನಡುವೆ ಕನಿಷ್ಟ ಅಂತರ ಇದ್ದೇ ಇರುತ್ತದೆ. ಅಲ್ಲದೆ ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಲ್ಲುವ ಪಾನಪ್ರಿಯರಿಗೆ ನೆರಳೂ ಸಿಕ್ಕಂತಾಗುತ್ತದೆ. ಹೀಗಾಗಿ ಈ ನಿರ್ಧಾರ ಸಮಂಜಸ ಎನಿಸಿದೆ.
ನಿನ್ನೆಯಷ್ಟೇ ಆಂಧ್ರ ಪ್ರದೇಶದ ಕೆಲವೆಡೆ ಕೊಡೆ ಇಲ್ಲದಿದ್ದರೆ ಮದ್ಯ ಇಲ್ಲ ಎಂದು ಸೂಚಿಸಲಾಗಿತ್ತು. ಅದರಂತೆ ಮದ್ಯಪ್ರಿಯರು ಕೊಡೆ ಹಿಡಿದುಕೊಂಡೇ ಮದ್ಯಕ್ಕಾಗಿ ಬಾರ್ ಮುಂದೆ ಕ್ಯೂ ನಿಂತಿದ್ದರು.