ಕರ್ನಾಟಕ

karnataka

ಯಾವುದೇ ಚಂಡಮಾರುತ ಶಾಶ್ವತ ಇರಲು ಸಾಧ್ಯವಿಲ್ಲ.. ಕೊರೊನಾ ಕುರಿತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

By

Published : Jun 28, 2020, 7:57 PM IST

ಹೆಚ್ಚಿನ ದೇಶಗಳು ಲಾಕ್‌ಡೌನ್‌ಗಳನ್ನು ಕೊನೆಗೊಳಿಸಿದ್ದು, ಆರ್ಥಿಕತೆಯತ್ತ ಗಮನ ಹರಿಸಲು ಪ್ರಾರಂಭಿಸಿವೆ. ಆರ್ಥಿಕತೆಯನ್ನು ಹೆಚ್ಚಿಸಲು ಸರ್ಕಾರ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ..

Vice President Naidu on COVID-19 pandemic
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ನವದೆಹಲಿ :ಕೋವಿಡ್-19 ಸಾಂಕ್ರಾಮಿಕ ರೋಗವು ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಲಾಕ್‌ಡೌನ್‌ ಹಂತದಿಂದ ಅನ್​ಲಾಕ್ ಹಂತಕ್ಕೆ ಪ್ರವೇಶಿಸುತ್ತಿರುವುದರಿಂದ ಕೊರೊನಾ ವೈರಸ್‌ ನಿಯಂತ್ರಿಸಲು ಎಲ್ಲಾ ಮುನ್ನೆಚ್ಚೆರಿಕೆ ತೆಗೆದುಕೊಳ್ಳಬೇಕೆಂದು ಜನರನ್ನು ಒತ್ತಾಯಿಸಿದ್ದಾರೆ. ಜನರು ಶಾಂತವಾಗಿರಬೇಕು 'ಯಾವುದೇ ಚಂಡಮಾರುತವು ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬ ದೃಢ ನಂಬಿಕೆಯನ್ನು ಹೊಂದಬೇಕೆಂದು' ಮನವಿ ಮಾಡಿದ್ದಾರೆ.

ಹೆಚ್ಚಿನ ದೇಶಗಳು ಲಾಕ್‌ಡೌನ್‌ಗಳನ್ನು ಕೊನೆಗೊಳಿಸಿದ್ದು, ಆರ್ಥಿಕತೆಯತ್ತ ಗಮನ ಹರಿಸಲು ಪ್ರಾರಂಭಿಸಿವೆ. ಆರ್ಥಿಕತೆಯನ್ನು ಹೆಚ್ಚಿಸಲು ಸರ್ಕಾರ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಪ್ರತಿಯೊಬ್ಬರೂ ಅದನ್ನು ಬೆಂಬಲಿಸುವಂತೆ ಹೇಳಿದ್ದಾರೆ.

ಆರೋಗ್ಯ ಬಿಕ್ಕಟ್ಟಿನ ವಿರುದ್ಧ ಸಾಮೂಹಿಕವಾಗಿ ಹೋರಾಡಲು ಜನರಿಗೆ ಕರೆ ನೀಡಿದ್ದು, ಭಾರತದ ಶಕ್ತಿ ಆಧ್ಯಾತ್ಮಿಕತೆ ಮತ್ತು ವಿಜ್ಞಾನದ ಮೇಲಿನ ನಂಬಿಕೆಯಲ್ಲಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.

ABOUT THE AUTHOR

...view details