ಕರ್ನಾಟಕ

karnataka

ETV Bharat / bharat

ವಂದೇ ಮಾತರಂ ಸ್ವೀಕರಿಸದವರಿಗೆ ಭಾರತದಲ್ಲಿ ಬದುಕಲು ಹಕ್ಕಿಲ್ಲ: ಸಚಿವ ಸಾರಂಗಿ

ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಬೇಕು. ಕಾಂಗ್ರೆಸ್​ ಇದರ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ. "ದೇಶಕ್ಕೆ ಬೆಂಕಿ ಹಚ್ಚಿದವರು ದೇಶಭಕ್ತರಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಪಸುಸಂಗೋಪನಾ ಇಲಾಖೆ ರಾಜ್ಯ ಸಚಿವ ಸಾರಂಗಿ ಆಕ್ರೋಶ ವ್ಯಕ್ತಪಡಿಸಿದರು.

No right to live in India if you can't accept Vande Mataram: Pratap Sarangi
ಪಶು ಸಂಗೋಪನೆ ಖಾತೆ ರಾಜ್ಯ ಸಚಿವ

By

Published : Jan 19, 2020, 8:15 AM IST

Updated : Jan 19, 2020, 11:35 AM IST

ಸೂರತ್ (ಗುಜರಾತ್): ಭಾರತದ ಐಕ್ಯತೆ, ಸ್ವಾತಂತ್ರ್ಯ ಹಾಗೂ ವಂದೇ ಮಾತರಂ ಸ್ವೀಕರಿಸದವರಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲ ಎಂದು ಸಚಿವ ಪ್ರತಾಪ್ ಚಂದ್ರ ಸಾರಂಗಿ ಕುಟುಕಿದ್ದಾರೆ.

ಪಶು ಸಂಗೋಪನೆ ಖಾತೆ ರಾಜ್ಯ ಸಚಿವ

ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಬೇಕು. ಕಾಂಗ್ರೆಸ್​ ಇದರ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ. "ದೇಶಕ್ಕೆ ಬೆಂಕಿ ಹಚ್ಚಿದವರು ದೇಶಭಕ್ತರಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶ ಹೊರ ಹಾಕಿದರು.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುತ್ತಿರುವ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ನೀಡುವ ಸಿಎಎ ಅನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ. ಕಾಂಗ್ರೆಸ್​ ಮಾಡಿದ ವಿಭಜನೆಯ ಪಾಪಕ್ಕೆ ಪ್ರಾಯಶ್ಚಿತವಾಗಿ ಸಿಎಎ ಒಂದು ಮಾರ್ಗ ಎಂದು ಹೇಳಿದರು.

ಕಳೆದ ವರ್ಷ ಸೆಪ್ಟಂಬರ್​ನಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ಹಿಂತೆಗೆದುಕೊಂಡಾಗ ಭುಗಿಲೆದ್ದ ಪ್ರತಿಭಟನೆ ವಿರುದ್ಧ ಸಾರಂಗಿ ಹೀಗೆ ಪ್ರತಿಕ್ರಿಯಿಸಿದ್ದರು.

Last Updated : Jan 19, 2020, 11:35 AM IST

ABOUT THE AUTHOR

...view details