ಕರ್ನಾಟಕ

karnataka

ETV Bharat / bharat

ರಕ್ತದ ಪ್ರಕಾರಕ್ಕೂ ಕೋವಿಡ್​ ತೀವ್ರತೆಗೂ ಯಾವುದೇ ಸಂಬಂಧವಿಲ್ಲ: ಅಧ್ಯಯನ ವರದಿ - coronavirus latest news

ಸೋಂಕಿತರ ರಕ್ತದ ಪ್ರಕಾರವನ್ನು ಲೆಕ್ಕಿಸದೆ ಉರಿಯೂತದ ಗುರುತುಗಳು ಒಂದೇ ರೀತಿ ಇರುವುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಹಿರಿಯ ಲೇಖಕ ಅನಾಹಿತಾ ದುವಾ ವಿವರಿಸುತ್ತಾರೆ.

ಮ್ಯಾಸಚೂಸೆಟ್ಸ್ ಅಧ್ಯಯನ
ಮ್ಯಾಸಚೂಸೆಟ್ಸ್ ಅಧ್ಯಯನ

By

Published : Jul 18, 2020, 4:30 PM IST

ಹೈದರಾಬಾದ್:ಮ್ಯಾಸಚೂಸೆಟ್ಸ್ ಅಧ್ಯಯನದ ಪ್ರಕಾರ, ರಕ್ತದ ಪ್ರಕಾರ ಮತ್ತು ಕೊರೊನಾ ತೀವ್ರತೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಈ ಅಧ್ಯಯನವು, ರಕ್ತದ ABO ಗುಂಪುಗಳಲ್ಲಿ ಯಾವುದೇ ಮಾದರಿ ಸಹ, ಸೋಂಕಿತನಲ್ಲಿ ಕೊರೊನಾ ಉಲ್ಬಣಕ್ಕೆ ಅಥವಾ ಸಾವಿಗೆ ಕಾರಣವಲ್ಲ ಎಂದು ವ್ಯಾಖ್ಯಾನಿಸಿದೆ.

ಈ ಮೊದಲ ವರದಿಗಳು, ‘ಎ’ ಪ್ರಕಾರದ ರಕ್ತದ ವ್ಯಕ್ತಿಗಳಲ್ಲಿ ಕೋವಿಡ್​-19 ಸೋಂಕು ಮತ್ತು ಹೆಚ್ಚಿನ ಮರಣದ ಅಪಾಯದ ನಡುವಿನ ಸಂಬಂಧವನ್ನು ಸಂಯೋಜಿಸಿವೆ.

ಈ ಕುರಿತು ಮ್ಯಾಸಚೂಸೆಟ್ಸ್ ಜನರಲ್​ ಆಸ್ಪತ್ರೆ ಬೃಹತ್ ಡೇಟಾಬೇಸ್​ ಮೂಲಕ ಸಂಶೋಧನೆ ನಡೆಸಿತ್ತು. ಈ ವೇಳೆ ಮಹತ್ವದ ವಿಚಾರಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಕೊರೊನಾಗೆ ಧನಾತ್ಮಕ ಪರೀಕ್ಷೆ ಮಾಡಿದ ಮತ್ತು ಅವರ ರಕ್ತದ ಗುಂಪನ್ನು ದಾಖಲಿಸಿದ 1,289 ರೋಗಲಕ್ಷಣದ ವಯಸ್ಕ ರೋಗಿಗಳ ಮೇಲೆ ಅಧ್ಯಯನ ಮಾಡಿದೆ.

ಇದರಲ್ಲಿ ಉರಿಯೂತವು ಒಂದು ಪ್ರಮುಖವಾದ ಸಂಶೋಧನೆಯಾಗಿದೆ. ಪ್ರಸ್ತುತ ವೈಜ್ಞಾನಿಕ ಚಿಂತನೆಯೆಂದರೆ, ವ್ಯವಸ್ಥಿತ ಉರಿಯೂತದ ಮೂಲಕ ಕೋವಿಡ್​-19 ದೇಹದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಇದು ಕಾಯಿಲೆ ಮತ್ತು ಸಾವಿಗೆ ಕಾರಣವಾಗಬಹುದು. ಆದರೆ ಇದಕ್ಕೂ ವ್ಯಕ್ತಿಯ ರಕ್ತದ ಮಾದರಿಗೂ ಸಂಬಂಧವಿಲ್ಲ. ಕಾರಣ ಸೋಂಕಿತರಲ್ಲಿ ಅವರ ರಕ್ತದ ಪ್ರಕಾರವನ್ನು ಲೆಕ್ಕಿಸದೆ ಉರಿಯೂತದ ಗುರುತುಗಳು ಒಂದೇ ರೀತಿ ಇರುವುದನ್ನು ನಾವು ಕಂಡುಕೊಂಡಿದ್ದೇವೆ ಎಂದು ಹಿರಿಯ ಲೇಖಕ ಅನಾಹಿತಾ ದುವಾ ವಿವರಿಸುತ್ತಾರೆ

ಈ ಹಿಂದೆ ಯುಕೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ಸೇರಿದಂತೆ ಅನೇಕರು, ಕೊರೊನಾ ವೈರಸ್ ರೋಗಿಗಳ ರಕ್ತದಲ್ಲಿನ ಪ್ರೋಟೀನ್‌ಗಳು ರೋಗದ ತೀವ್ರತೆಗೆ ಸಂಬಂಧಿಸಿರುವುದನ್ನು ಗುರುತಿಸಿದ್ದರು. ಐಎಲ್ -6, ಉರಿಯೂತವನ್ನು ಉಂಟುಮಾಡುವ ಪ್ರೋಟೀನ್ ಎಂದು ಅವರು ಹೇಳಿದ್ದರು ಮತ್ತು ಹಿಂದಿನ ಅಧ್ಯಯನಗಳ ಪ್ರಕಾರ ಇದು ತೀವ್ರವಾದ ಕೋವಿಡ್ -19 ರೋಗಲಕ್ಷಣಗಳೊಂದಿಗೆ ಸಂಬಂಧಿಸಿದೆ.

ABOUT THE AUTHOR

...view details