ನವದೆಹಲಿ: ಲಡಾಖ್ ಮತ್ತು ಚೀನಾ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಇತ್ತೀಚೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಲಡಾಖ್-ಚೀನಾ ವಿಷಯದ ಬಗ್ಗೆ ಮೋದಿ-ಟ್ರಂಪ್ ನಡುವೆ ಮಾತುಕತೆ? - ಮೋದಿ ಮತ್ತು ಟ್ರಂಪ್ ನಡುವೆ ಸಂಭಾಷಣೆ
ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಟ್ರಂಪ್ ನಡುವೆ ಇತ್ತೀಚೆಗೆ ಯಾವುದೇ ಸಂಭಾಷಣೆ ನಡೆದಿಲ್ಲ. ರಾಜತಾಂತ್ರಿಕ ಸಂಪರ್ಕಗಳ ಮೂಲಕ ಭಾರತವು ಚೀನಾದೊಂದಿಗೆ ನೇರ ಸಂಪರ್ಕ ಹೊಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮೊದಿ ಮತ್ತು ಟ್ರಂಪ್ ನಡುವೆ ಸಂಭಾಷಣೆ ನಡೆದಿಲ್ಲ
ಏಪ್ರಿಲ್ 4, 2020 ರಂದು ಹೈಡ್ರಾಕ್ಸಿಕ್ಲೋರೊಕ್ವಿನ್ ವಿಷಯದ ಬಗ್ಗೆ ಅವರ ನಡುವಿನ ಕೊನೆಯ ಸಂಭಾಷಣೆ ನಡೆದಿದೆ. ಸ್ಥಾಪಿತ ಕಾರ್ಯವಿಧಾನ ಮತ್ತು ರಾಜತಾಂತ್ರಿಕ ಸಂಪರ್ಕಗಳ ಮೂಲಕ ನಾವು ಚೀನಿಯರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಲಡಾಖ್ ವಿಷಯದ ಬಗ್ಗೆ 'ಪ್ರಧಾನಿ ಮೋದಿ ಉತ್ತಮ ಮನಸ್ಥಿತಿಯಲ್ಲಿಲ್ಲ' ಎಂದು ಅಮೆರಿಕಾ ಅಧ್ಯಕ್ಷರು ಹೇಳಿದ್ದಾರೆ. ಹಾಗಾಗಿ ಈ ಇಬ್ಬರು ನಾಯಕರ ಮಧ್ಯೆ ಮತ್ತೆ ಮಾತುಕತೆ ನಡೆಯಿತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.