ನವದೆಹಲಿ:ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ನಿನ್ನೆ ಅನುಮಾನಾಸ್ಪದ ಬ್ಯಾಗ್ವೊಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಶಂಕಿತ ಬ್ಯಾಗ್ನಲ್ಲಿ ಆರ್ಡಿಎಕ್ಸ್ ಅಲ್ಲ, ಸಿಕ್ಕಿದ್ದು ಚಾಕೋಲೆಟ್, ಸಿಹಿ ಪದಾರ್ಥ, ಗೋಡಂಬಿ! - ಬ್ಯಾಗ್ನಲ್ಲಿ ಆರ್ಡಿಎಕ್ಸ್
ನಿನ್ನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಶಂಕಿತ ಬ್ಯಾಗ್ನಲ್ಲಿ ಯಾವುದೇ ರೀತಿಯ ಆರ್ಡಿಎಕ್ಸ್ ಇರಲಿಲ್ಲ ಎಂದು ಇದೀಗ ಖಚಿತಗೊಂಡಿದೆ.

ಆದರೆ, ಪತ್ತೆಯಾಗಿರುವ ಶಂಕಿತ ಬ್ಯಾಗ್ನಲ್ಲಿ ಆರ್ಡಿಎಕ್ಸ್ ಇರಲೇ ಇಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ನಿನ್ನೆ ಬ್ಯಾಗ್ ಪತ್ತೆಯಾಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶಂಕಿತ ಬ್ಯಾಗ್ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ಪೊಲೀಸ್ ತಪಾಸಣಾ ದಳ ಈ ಬ್ಯಾಗ್ ಪರಿಶೀಲನೆ ನಡೆಸಿತ್ತು. ಈ ಬ್ಯಾಗ್ನಲ್ಲಿ ಅಪಾಯಕಾರಿ ಆರ್ಡಿಎಕ್ಸ್ ಇದೆ ಎಂದು ಹೇಳಲಾಗಿತ್ತು. ಆದರೆ, ಚಕ್ ಮಾಡಿದಾಗ ಅದರೊಳಗೆ ದೀಪಾವಳಿಗಾಗಿ ಖರೀದಿ ಮಾಡಿದ್ದ ಪಟಾಕಿಗಳು ಇದ್ದವು ಎಂದು ತಿಳಿದು ಬಂದಿದೆ. ಇದರ ಜತೆಗೆ ಚಾಕೋಲೆಟ್, ಗೋಡಂಬಿ ಹಾಗೂ ಕೆಲ ಸಿಹಿ ಪದಾರ್ಥಗಳು ಲಭ್ಯವಾಗಿವೆ.
ನಿನ್ನೆ ತಡರಾತ್ರಿ ಮೂರು ಗಂಟೆ ಸುಮಾರಿಗೆ ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸರಿಗೆ ಕರೆಯೊಂದು ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಟರ್ಮಿನಲ್-3 ಪ್ರಯಾಣಿಕರಿಗೆ ನಿರ್ಬಂಧಿಸಿತ್ತು. ಇನ್ನು ಟರ್ಮಿನನಲ್ 3ರ ರಸ್ತೆಗಳನ್ನು ಸಹ ಬಂದ್ ಮಾಡಲಾಗಿತ್ತು.