ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಪಂಜಾಬ್‌ನ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನವೆಂಬರ್ 26 ರಂದು ತಮ್ಮ 'ದೆಹಲಿ ಚಲೋ' ಪ್ರತಿಭಟನೆಯ ಭಾಗವಾಗಿ ದೆಹಲಿಯನ್ನು ತಲುಪಲು ಪ್ರಯತ್ನಿಸುತ್ತಿದೆ.
ದೆಹಲಿ ಪೊಲೀಸರು ರೈತರಿಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಿಲ್ಲ ಮತ್ತು ಹರಿಯಾಣ ಸರ್ಕಾರ ಪಂಜಾಬ್-ಹರಿಯಾಣ ಗಡಿಗಳಿಗೆ ಮೊಹರು ಹಾಕಿದೆ. "ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಾರ್ಗಸೂಚಿಗಳ ಪ್ರಕಾರ, ಪ್ರತಿಭಟನೆಗಳನ್ನು ಅನುಮತಿಸಲಾಗುವುದಿಲ್ಲ. ನವೆಂಬರ್ 26-27ರಂದು ರೈತರ ಪ್ರತಿಭಟನೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ದೆಹಲಿಗೆ ಬರದಂತೆ ನಾವು ರೈತರಿಗೆ ಮನವಿ ಮಾಡುತ್ತೇವೆ. ಅವರು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನವದೆಹಲಿ ಡಿಸಿಪಿ ಇಶ್ ಸಿಂಘಾಲ್ ಹೇಳಿದ್ದಾರೆ.