ನವದೆಹಲಿ:ಕಳೆದ 14 ದಿನಗಳಲ್ಲಿ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡಿ ಬಂದಿರುವ ಬೆಂಗಳೂರಿನ ಯಾವುದೇ ಪ್ರಯಾಣಿಕರಲ್ಲಿ ಶಂಕಿತ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ ತಿಳಿಸಿದೆ.
ಕೊರೊನಾ ವೈರಸ್: ಚೀನಾಗೆ ಭೇಟಿ ನೀಡಿ ಬಂದ ಬೆಂಗಳೂರಿಗರು ಸೇಫ್ - ಚೀನಾಗೆ ಭೇಟಿ ನೀಡಿ ಬಂದ ಬೆಂಗಳೂರಿಗರು ಸೇಫ್
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆಯಿಂದ ಇಂದು ಬೆಳಿಗ್ಗೆ 8ರವರೆಗೆ ಒಟ್ಟು 392 ಪ್ರಯಾಣಿಕರನ್ನು ತಪಾಸಣಾ ಪ್ರಕ್ರಿಯೆಗೆ ಒಳಪಡಿಸಲಾಗಿದ್ದು, ಕಳೆದ 14 ದಿನಗಳಲ್ಲಿ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡಿ ಬಂದಿರುವ ಬೆಂಗಳೂರಿನ ಯಾವುದೇ ಪ್ರಯಾಣಿಕರಲ್ಲಿ ಶಂಕಿತ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಿಲ್ಲ ಎಂದು ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ ತಿಳಿಸಿದೆ.
ಚೀನಾದಲ್ಲಿ ನೆಲೆಸಿರುವ ಭಾರತೀಯರು ಹಾಗೂ ಪ್ರವಾಸಿಗರು ದೇಶಕ್ಕೆ ಬರುತ್ತಿದ್ದು, ಮಹಾಮಾರಿ ಕೊರೊನಾ ವೈರಸ್ ಭಾರತದಲ್ಲೂ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಚೀನಾದಿಂದ ಬರುವವರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆಯಿಂದ ಇಂದು ಬೆಳಿಗ್ಗೆ 8ರವರೆಗೆ ಒಟ್ಟು 392 ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಒಳಪಡಿಸಲಾಗಿದೆ.
ಈಗಾಗಲೇ ಚೀನಾದಿಂದ ಬಂದಿರುವ ರಾಜಸ್ಥಾನ, ಹೈದರಾಬಾದ್, ಬಿಹಾರ, ಕೋಲ್ಕತ್ತಾ ಮೂಲದ ವ್ಯಕ್ತಿಗಳಲ್ಲಿ ಶಂಕಿತ ಕೊರೊನಾ ವೈರಸ್ ಕಂಡುಬಂದಿರುವುದು ವರದಿಯಾಗಿದೆ. ಆದರೆ ಕಳೆದ 14 ದಿನಗಳಲ್ಲಿ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡಿ ಹಿದಿರುಗಿರುವ ಬೆಂಗಳೂರಿನ ಯಾವುದೇ ಪ್ರಯಾಣಿಕರಲ್ಲಿ ಸೋಂಕಿನ ಲಕ್ಷಣ ಪತ್ತೆಯಾಗಿಲ್ಲ ಎಂದು ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ ತಿಳಿಸಿದೆ.