ನವದೆಹಲಿ:ಕಳೆದ ವರ್ಷ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಕೋಟ್‌ನ ಭಯೋತ್ಪಾದಕ ಶಿಬಿರದ ಮೇಲೆ ಇಂಡಿಯನ್ ಏರ್ ಫೋರ್ಸ್ ವಾಯುದಾಳಿ ನಡೆಸಿತ್ತು. ಈ ವೇಳೆ, 150 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಪಾಕಿಸ್ತಾನಿ ವಿಮಾನಗಳಿರಲಿಲ್ಲ ಎಂದು ವಾಯುಸೇನಾ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ ತಿಳಿಸಿದ್ದಾರೆ.
ಭಾರತದ ವಾಯುದಾಳಿಯ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ನಿಖರವಾಗಿ ಒಂದು ವರ್ಷದ ಹಿಂದೆ ಭಾರತವು ಬಾಲಾಕೋಟ್‌ನ ಭಯೋತ್ಪಾದಕ ಶಿಬಿರದ ಮೇಲೆ ವಾಯುದಾಳಿ ನಡೆಸಿದೆ."ಸರ್ಕಾರಕ್ಕೆ ನೀಡಲಾದ ತಾಂತ್ರಿಕ ಮಾಹಿತಿಯ ಪ್ರಕಾರ ನಮ್ಮ ದಾಳಿಯೂ ಯಶಸ್ವಿಯಾಗಿದೆ ಎಂದು ಧನೋವಾ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ದಾಳಿಗೆ ಸಂಬಂಧಿಸಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾವು ಸ್ಟ್ಯಾಂಡ್ ಆಫ್ ಶಸ್ತ್ರಾಸ್ತ್ರಗಳನ್ನು ಬಳಸಿದ್ದೆವು. ಈ ದಾಳಿಯ ಬಗ್ಗೆ ಪಾಕಿಸ್ತಾನದವರಿಗೆ ಯಾವುದೇ ಅರಿವು ಇರಲಿಲ್ಲ. ನಾವು ಯಾವ ರೀತಿಯ ವಾರ್ಹೆಡ್ಸ್ ಬಳಸಿದ್ವಿ ಎಂಬುದು ಅವರಿಗೆ ತಿಳಿದಿಲ್ಲ. ದಾಳಿಗೆ ನಾವು ಯಾವ ರೀತಿ ಸಿದ್ಧರಾಗಿದ್ವಿ, ಅದು ಹೇಗೆ ಸ್ಫೋಟಗೊಳ್ಳುತ್ತದೆ ಎಂಬ ಯಾವ ಜ್ಞಾನ ಅವರಿಗೆ ಇರಲಿಲ್ಲ ಎಂದರು.