ಪ್ರಶ್ನೆ:ಕಾಂಗ್ರೆಸ್ನ 23 ಹಿರಿಯ ನಾಯಕರು ಬರೆದ ಪತ್ರವೊಂದು ಪಕ್ಷದ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿದೆ. ಪಕ್ಷದ ಹಿರಿಯ ನಾಯಕರ ವಿರುದ್ಧ ಕಿರಿಯ ನಾಯಕರು ತಂದಿಟ್ಟಿರುವ ಈ ಚರ್ಚೆ ಪಕ್ಷದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆಯೇ?
ಉತ್ತರ:ನೋಡಿ, ಆರಂಭದಿಂದಲೂ ಕಾಂಗ್ರೆಸ್ ಪಕ್ಷವು ಯುವ ನಾಯಕರನ್ನು ಬೆಂಬಲಿಸಿದೆ ಮತ್ತು ಉತ್ತೇಜಿಸುತ್ತಾ ಬಂದಿದೆ. ಇಂದಿರಾ ಗಾಂಧಿಯವರ ಆಡಳಿತದ ಸಮಯದಲ್ಲಿ, ಅನೇಕ ಯುವಕರು ಪಕ್ಷಕ್ಕೆ ಸೇರಿದ್ದರು. ಸಂಜಯ್ ಗಾಂಧಿಯವರು ಕಮಲ್ ನಾಥ್ ಅವರಂತಹ ಅನೇಕ ಯುವ ನಾಯಕರನ್ನು ಪಕ್ಷಕ್ಕೆ ಕರೆತಂದರು. ನಂತರ, ರಾಜೀವ್ ಗಾಂಧಿ ಅಧಿಕಾರ ವಹಿಸಿಕೊಂಡಾಗ, ನಾನು, ಗುಲಾಮ್ ನಬಿ ಆಜಾದ್, ಅಹ್ಮದ್ ಪಟೇಲ್, ಆನಂದ್ ಶರ್ಮಾ ಮತ್ತು ಮುಕುಲ್ ವಾಸ್ನಿಕ್ ಸೇರಿದಂತೆ ಹಲವಾರು ಯುವಕರು ಕೈ ಪಾಳಯಕ್ಕೆ ಬಂದರು. ನಮ್ಮ ನಂತರ ಅವಿನಾಶ್ ಪಾಂಡೆ ಅವರಂತಹ ಯುವಕರು ಬಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆಯೇ, ರಾಹುಲ್ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಸೇರಿದ ನಂತರ ರಾಜೀವ್ ಸತವ್ ಮತ್ತು ಗೌರವ್ ಗೊಗೊಯ್ ಅವರಂತಹ ಅನೇಕ ಯುವಕರು ಬಂದರು. ಕಾಂಗ್ರೆಸ್ ಯುವ ಪೀಳಿಗೆಯ ಬಗ್ಗೆ ಸಹಜ ಒಲವು ಹೊಂದಿದೆ. ಪಕ್ಷದಲ್ಲಿ ಹಿರಿಯರ ನಾಯಕತ್ವ ಸಂಬಂಧ ಯಾವುದೇ ಚರ್ಚೆ ಇಲ್ಲ. ನಾವೆಲ್ಲರೂ ಯುವ ಪೀಳಿಗೆಗೆ ಅವಕಾಶ ಕಲ್ಪಿಸಲು ಸಿದ್ಧರಿದ್ದೇವೆ ಮತ್ತು ಅವರನ್ನು ಬೆಂಬಲಿಸುತ್ತೇವೆ. ಆದರೂ ಜ್ಯೋತಿರಾದಿತ್ಯ ಸಿಂಧಿಯಾ ಅವರಂತಹ ಒಂದು ಅಥವಾ ಎರಡು ನಿದರ್ಶನಗಳಿರಬಹುದು. ಅಲ್ಪಾವಧಿಯಲ್ಲಿ ಅವರಿಗೆ ಪಕ್ಷವು ಬಹಳಷ್ಟು ಗೌರವ ನೀಡಿತು. ಜ್ಯೋತಿರಾದಿತ್ಯ ಅವರು ಪಕ್ಷಕ್ಕೆ ಮರಳಿ ಬಂದಿದ್ದರೆ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಅವನು ಅಸಹನೆ ತೋರಿಸಿ ಪಕ್ಷ ತ್ಯಜಿಸಿ ಹೊರಟು ಹೋದರು.
ಪ್ರಶ್ನೆ:ಹಾಗಿದ್ದಲ್ಲಿ, ಕಾಂಗ್ರೆಸ್ ಹಿರಿಯ ನಾಯಕರು ಎತ್ತಿದ ನಾಯಕತ್ವದ ವಿಷಯಗಳ ಬಗ್ಗೆ ಚರ್ಚಿಸಲು ಆಗಸ್ಟ್ 24 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(CWC) ಸಭೆಯಲ್ಲಿ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರನ್ನು ಏಕೆ ಗುರಿಯಾಗಿಸಲಾಯಿತು?
ಉತ್ತರ: ನೋಡಿ, ಪತ್ರ ಬರೆಯುವುದು ಯಾರೊಬ್ಬರ ಉದ್ದೇಶವಾಗಿರಲಿಲ್ಲ. ಸಮಯ ಮತ್ತು ಅದು ಮಾಧ್ಯಮಗಳಿಗೆ ತಲುಪಿದ ರೀತಿ, ಜೊತೆಗೆ ಅದು ಸೋರಿಕೆಯಾದ ಬಗೆ CWC ಸದಸ್ಯರನ್ನು ಅಸಮಾಧಾನಗೊಳಿಸಿತು. ಇದೇ ವಿಚಾರ ಅವರನ್ನು ನಿರಾಶೆಗೊಳಿಸಿತು. ಇನ್ನೊಂದೆಡೆ ಅದು ಯಾಕೆ ಸಂಭವಿಸಿತು ಎಂದು ಅವರೆಲ್ಲಾ ಆಶ್ಚರ್ಯಪಡುವಂತಾಗಿದೆ? ಆಜಾದ್ ಒಬ್ಬ ಅನುಭವಿ ರಾಜಕಾರಣಿ. ವಾಸ್ತವವಾಗಿ, ಆಜಾದ್, ಅಹ್ಮದ್ ಪಟೇಲ್ ಮತ್ತು ಅಂಬಿಕಾ ಸೋನಿ ಅವರಿಗೆ ಪಕ್ಷದಲ್ಲಿ ವಿಶೇಷ ಸ್ಥಾನವಿದೆ. ನಾವು ಅವರನ್ನು ಎಂದಿಗೂ ಗೌರವಿಸುತ್ತೇವೆ. ಆಜಾದ್ ಅವರನ್ನು ಪಕ್ಷದ ಟ್ರಬಲ್ ಶೂಟರ್ ಎಂದು ಪರಿಗಣಿಸಲಾಗಿತ್ತು. ನಾವು ಏನಾದರೂ ತಪ್ಪು ಮಾಡಿದರೆ, ಆಜಾದ್ ಅದನ್ನು ಸರಿಪಡಿಸುತ್ತಿದ್ದರು. ಅಹ್ಮದ್ ಪಟೇಲ್ ಅವರೂ ಹೀಗೇ ಇದ್ದವರು. ಪತ್ರ ಸೋರಿಕೆಯಾದಾಗ ಅದರ ಹಿಂದೆ ಅಜಾದ್ ಹೆಸರು ಬಂದಿರುವುದನ್ನು ನೋಡಿ ನಾವು ಆಶ್ಚರ್ಯಪಟ್ಟಿದ್ದಂತೂ ಸತ್ಯ. ಪತ್ರ ಸೋರಿಕೆಯಾದ ಬಗ್ಗೆ ಸಿಡಬ್ಲ್ಯೂಸಿ ಸದಸ್ಯರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ಇದು ಸಭೆಯಲ್ಲಿ ಚರ್ಚೆಯನ್ನು ಹೆಚ್ಚಿಸಿತು. ಆದರೆ ಕೊನೆಯಲ್ಲಿ ನಮ್ಮೆಲ್ಲರ ಭಾವನೆಗಳಿಗೆ ಅರ್ಥ ಕೊಡುವೆ ಬಗ್ಗೆ ಸೋನಿಯಾ ಗಾಂಧಿ ನಮ್ಮೆಲ್ಲರಿಗೂ ಭರವಸೆ ನೀಡಿದರು.
ಪ್ರಶ್ನೆ: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಮರಳಿ ಬರುತ್ತಿರುವ ಬಗ್ಗೆ ಪಕ್ಷದಲ್ಲಿ ಅವರ ಕಳವಳವಿದೆಯೇ?
ಉತ್ತರ:ರಾಹುಲ್ ಬೇಗನೆ ಅಧಿಕಾರ ವಹಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಇದು ಸಿಡಬ್ಲ್ಯೂಸಿ ಸಭೆಯ ಸರ್ವಾನುಮತದ ದೃಷ್ಟಿಕೋನವಾಗಿತ್ತು. ಆಗಸ್ಟ್ 2019 ರಲ್ಲಿ ನಡೆದ ವಿಸ್ತೃತ ಸಿಡಬ್ಲ್ಯೂಸಿ ಸಭೆ ಕೂಡ ರಾಹುಲ್ ಅವರ ರಾಜೀನಾಮೆಯನ್ನು ಹಿಂಪಡೆಯುವಂತೆ ಒತ್ತಾಯಿಸಿತ್ತು. ಅವರ ನಾಯಕತ್ವದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಪೂರ್ಣ ನಂಬಿಕೆ ಇದೆ. ಪಕ್ಷಕ್ಕೆ ಸಾಕಷ್ಟು ಸವಾಲುಗಳು ಎದುರಾದ ಸಂದರ್ಭದಲ್ಲಿ ರಾಹುಲ್ ಅಧಿಕಾರ ವಹಿಸಿಕೊಂಡರು. ಇಂದು, ದೇಶದಲ್ಲಿ ಸಂಸದೀಯ ವ್ಯವಸ್ಥೆ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಪ್ರಶ್ನಿಸುವಂತಾಗಿದೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಕಾರ್ಯ ಶೈಲಿಗೆ ರಾಹುಲ್ ಸೂಕ್ತ ಉತ್ತರ ನೀಡುತ್ತಿದ್ದಾರೆ. ಅವರು ಕಾಂಗ್ರೆಸ್ ನಾಯಕರಾಗಿ ಹೊರಹೊಮ್ಮಿರುವ ಜೊತೆಗೆ ಪ್ರತಿಪಕ್ಷದ ನಾಯಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ಗೆ ಯುವ ನಾಯಕ ಮತ್ತು ಭಾರತಕ್ಕೆ ಯುವ ವಿರೋಧ ಪಕ್ಷದ ನಾಯಕನ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಅವರು ದೇಶಾದ್ಯಂತ ಪ್ರವಾಸ ಕೈಗೊಂಡು ಜನರನ್ನು ಭೇಟಿ ಮಾಡಿರುವ ಅನುಭವವನ್ನು ಗಳಿಸಿದ್ದಾರೆ. ಅದರೆ ಈಗ ಸಮಯ ಬದಲಾಗುತ್ತಿವೆ. ಜನರು ರೊಟ್ಟಿ ಮತ್ತು ಬೆಣ್ಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಲು ಪ್ರಾರಂಭಿಸಿದ್ದಾರೆ. ಇವೆಲ್ಲದರ ನಡುವೆ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಅಧಿಕಾರ ವಹಿಸಿಕೊಳ್ಳುವ ಸಮಯ ಬಂದಿದೆ.
ಪ್ರಶ್ನೆ: ಕಳೆದ ಎರಡು ದಶಕಗಳಿಂದ ಸಿಡಬ್ಲ್ಯೂಸಿ ಚುನಾವಣೆಗಳು ನಡೆದಿಲ್ಲ ಎಂಬುದರ ಬಗ್ಗೆ ಏನು ಹೇಳುತ್ತೀರಿ?