ತಿರುವನಂತಪುರಂ (ಕೇರಳ):ಕೇರಳದಲ್ಲಿ 80 ಕೊರೊನಾ ಹಾಟ್ಸ್ಪಾಟ್ಗಳಿದ್ದರೂ ನಿನ್ನೆ ಒಂದೇ ಒಂದು ಹೊಸ ಪ್ರಕರಣ ಪತ್ತೆಯಾಗಿಲ್ಲ.
ಕೇರಳದ 80 ಕೊರೊನಾ ಹಾಟ್‌ಸ್ಪಾಟ್‌ನಲ್ಲಿ ಒಂದೇ ಒಂದು ಪಾಸಿಟಿವ್ ಇಲ್ಲ.. - ಕೊರನಾ ಹಾಟ್‌ಸ್ಪಾಟ್
ಅತೀ ಹೆಚ್ಚು ಕೊರೊನಾ ಪ್ರಕರಣಗಳಿರುವ ಪ್ರದೇಶಗಳೆಂದರೆ, ಕಣ್ಣೂರು, ಕೊಟ್ಟಾಯಂ ಮತ್ತು ಇಡುಕಿ. ಕಣ್ಣೂರಿನಲ್ಲಿ ಅತೀ ಹೆಚ್ಚು ಅಂದರೆ 43 ಕೊರೊನಾ ಸೋಂಕಿತರಿದ್ದಾರೆ.

"ರಾಜ್ಯದಲ್ಲಿ ಶುಕ್ರವಾರ ಯಾವುದೇ ಹೊಸ ಪ್ರಕರಣಗಳು ದಾಖಲಾಗಲಿಲ್ಲ. ಪರೀಕ್ಷೆಗೆ ಕಳುಹಿಸಿದ್ದ 9 ಜನರ ಮಾದರಿಗಳು ನೆಗೆಟಿವ್ ಬಂದಿವೆ. ರಾಜ್ಯದಲ್ಲಿ 102 ಸೋಂಕಿರಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ರಾಜ್ಯ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಹೇಳಿದ್ದಾರೆ. ಈವರೆಗೆ 392 ಜನ ಕೊರೊನಾಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 432 ಆಸ್ಪತ್ರೆಗಳಲ್ಲಿ 21,499 ಜನ ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಸಚಿವೆ ತಿಳಿಸಿದ್ದಾರೆ.
ಕೇರಳದಲ್ಲಿ ಒಟ್ಟು 80 ಕೊರೊನಾ ಹಾಟ್‌ಸ್ಪಾಟ್‌ಗಳಿವೆ. ಅತೀ ಹೆಚ್ಚು ಕೊರೊನಾ ಪ್ರಕರಣಗಳಿರುವ ಪ್ರದೇಶಗಳೆಂದರೆ, ಕಣ್ಣೂರು, ಕೊಟ್ಟಾಯಂ ಮತ್ತು ಇಡುಕಿ. ಕಣ್ಣೂರಿನಲ್ಲಿ ಅತೀ ಹೆಚ್ಚು ಅಂದರೆ 43 ಕೊರೊನಾ ಸೋಂಕಿತರಿದ್ದಾರೆ. ಕೊಟ್ಟಾಯಂನಲ್ಲಿ 18 ಮತ್ತು ಇಡುಕಿಯಲ್ಲಿ 14 ಸೋಂಕಿತರಿದ್ದಾರೆ ಎಂದು ಕೆ ಕೆ ಶೈಲಾಜಾ ಮಾಹಿತಿ ನೀಡಿದ್ದಾರೆ.