ಮುಂಬೈ :ಕೊರೊನಾ ಸೋಂಕು ಆವರಿಸಿಕೊಂಡ ಬಳಿಕ ಮೊದಲ ಬಾರಿಗೆ ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.
ಏಷ್ಯಾದ ಅತ್ಯಂತ ಜನ ನಿಬಿಡ ಪ್ರದೇಶವೆನಿಸಿಕೊಂಡಿರುವ ಧಾರಾವಿಯಲ್ಲಿ ಒಂದಕ್ಕೊಂದು ಅಂಟಿಕೊಂಡಿರುವಂತೆ ಮನೆಗಳಿದ್ದು, ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೆ ಶುಚಿತ್ವ ಕಾಪಾಡುವುದು ದೊಡ್ಡ ಸವಾಲಾಗಿದೆ. ಹೀಗಾಗಿ, ಇಲ್ಲಿ ಯಾವುದೇ ಕಾರಣಕ್ಕೂ ಕೋವಿಡ್ ಸೋಂಕು ಹಬ್ಬದಂತೆ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು ತೀವ್ರ ನಿಗಾ ಇಟ್ಟಿದ್ದಾರೆ.
ಓದಿ : ರಾಜ್ಯದಲ್ಲಿಂದು 1,005 ಜನರಿಗೆ ಕೊರೊನಾ: 5 ಮಂದಿ ಬಲಿ
ಧಾರಾವಿಯ ಜನ ಸಂಖ್ಯೆ ಮತ್ತು ಜೀವನ ಶೈಲಿ ನೋಡಿದರೆ, ಅಲ್ಲಿ ಕೋವಿಡ್ ಮಿತಿ ಮೀರಿ ಹಬ್ಬಬೇಕಿತ್ತು. ಆದರೆ, ಅಧಿಕಾರಿಗಳ ಮತ್ತು ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದ ಶೂನ್ಯ ಪ್ರಕರಣಗಳು ವರದಿಯಾಗುವಂತಾಗಿದೆ.
ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 3,580 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 19.51 ಲಕ್ಷಕ್ಕೂ ಹೆಚ್ಚು. ಜನರಿಗೆ ಸೋಂಕು ಬಾಧಿಸಿದ್ದು, 49 ಸಾವಿರಕ್ಕೂ ಹೆಚ್ಚು ಜನರನ್ನು ಮಹಾಮಾರಿ ಬಲಿ ತೆಗೆದುಕೊಂಡಿದೆ.