ನವದೆಹಲಿ:ಕಳೆದ 7 ದಿನಗಳಿಂದ ನಿಜಾಮುದ್ದೀನ್ ಮರ್ಕಜ್ನಿಂದ ಹಿಂದಿರುಗಿದವರಲ್ಲಿ ಕೊರೊನಾ ಸೋಂಕು ಕಂಡುಬರದ ಹಿನ್ನೆಲೆಯಲ್ಲಿ ಆರೋಗ್ಯ ಬುಲೆಟಿನ್ನಲ್ಲಿ ನಿಜಾಮುದ್ದೀನ್ ಮರ್ಕಜ್ ಅಡಿಯಲ್ಲಿ ಪ್ರಕರಣಗಳನ್ನು ಪ್ರಸ್ತಾಪಿಸುವ ಅಭ್ಯಾಸವನ್ನು ಕೈಬಿಡಲಾಗಿದೆ ಎಂದು ನವದೆಹಲಿ ಆರೋಗ್ಯ ಸಚಿವ ಸಂತ್ಯೇಂದರ್ ಜೈನ್ ಹೇಳಿದ್ದಾರೆ
7 ದಿನದಿಂದ ಮರ್ಕಜ್ಗೆ ಸಂಬಂಧಿಸಿದ ಪ್ರಕರಣ ಇಲ್ಲ.. ಬುಲೆಟಿನ್ನಿಂದ ಆ ವರ್ಗ ಕೈಬಿಟ್ಟ ದೆಹಲಿ ಸರ್ಕಾರ - ನಿಜಾಮುದ್ದೀನ್ ಮಾರ್ಕಾಜ್ ಲೇಟೆಸ್ಟ್ ನ್ಯೂಸ್
ಕಳೆದ ಏಳು ದಿನಗಳಲ್ಲಿ ನಿಜಾಮುದ್ದೀನ್ ಮರ್ಕಜ್ ಗೆ ಸಂಬಂಧಿಸಿದ ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗದಿರುವುದಕ್ಕೆ ಆರೋಗ್ಯ ಬುಲೆಟಿನ್ನಲ್ಲಿ ಮರ್ಕಜ್ ವರ್ಗವನ್ನು ಕೈಬಿಡಲಾಗಿದೆ.
![7 ದಿನದಿಂದ ಮರ್ಕಜ್ಗೆ ಸಂಬಂಧಿಸಿದ ಪ್ರಕರಣ ಇಲ್ಲ.. ಬುಲೆಟಿನ್ನಿಂದ ಆ ವರ್ಗ ಕೈಬಿಟ್ಟ ದೆಹಲಿ ಸರ್ಕಾರ Satyendar Jain](https://etvbharatimages.akamaized.net/etvbharat/prod-images/768-512-6909047-741-6909047-1587637261628.jpg)
ಕಳೆದ ಏಳು ದಿನಗಳಲ್ಲಿ ನಿಜಾಮುದ್ದೀನ್ ಮರ್ಕಜ್ಗೆ ಸಂಬಂಧಿಸಿದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ, ಆದ್ದರಿಂದ ಖಾಲಿ ವರ್ಗದೊಂದಿಗೆ ಬುಲೆಟಿನ್ ಬಿಡುಗಡೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ಮೊದಲು ಬಿಡುಗಡೆ ಮಾಡಲಾಗುತ್ತಿದ್ದ ಬುಲೆಟಿನ್ನಲ್ಲಿ ವಿಶೇಷ ವಿಭಾಗದ ಅಡಿಯಲ್ಲಿ ತಬ್ಲಿಘಿ ಜಮಾತ್ ಮರ್ಕಜ್ನಲ್ಲಿ ಭಾಗಿಯಾಗಿದ್ದವರು ಎಂದು ನಮೂದಿಸಲಾಗುತ್ತಿತ್ತು. ಆದರೆ, ನವದೆಹಲಿ ಅಲ್ಪಸಂಖ್ಯಾತ ಆಯೋಗ ಮರ್ಕಜ್ ಎಂಬ ಬದಲು ಸ್ಪೆಷಲ್ ಆಪರೇಷನ್ ಎಂದು ನಮೋದಿಸುವಂತೆ ಕೇಳಿಕೊಂಡಿತ್ತು. ಸದ್ಯ ಒಂದು ವಾರದಿಂದ ಮರ್ಕಜ್ನಿಂದ ಬಂದವರಲ್ಲಿ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ವರ್ಗವನ್ನು ಕೈಬಿಡಲಾಗಿದೆ.