ಭೋಪಾಲ್(ಮಧ್ಯಪ್ರದೇಶ): ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್, ಪಾಕಿಸ್ತಾನ ಮೂಲದ ಜೈಷ್ ಎ ಮೊಹಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ಗೆ ಶಾಪ ಕೊಟ್ಟರೆ ಸಾಕಲ್ಲವೆ, ಸರ್ಜಿಕಲ್ ಸ್ಟ್ರೈಕ್ ಅವಶ್ಯಕತೆ ಇಲ್ಲ ಎಂದು ಸಾಧ್ವಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಟಿಎಫ್ ಚೀಫ್ ಹೇಮಂತ್ ಕರ್ಕರೆ ಅವರಿಗೆ ನಾನೆ ಶಾಪಕೊಟ್ಟಿದ್ದು ಎಂದು ಸಾಧ್ವಿ ಹೇಳಿದ್ದಾರೆ. ಹಾಗಾದ್ರೆ ಮಸೂದ್ ಅಜರ್ಗೂ ಶಾಪ ಕೊಡಬಹುದಲ್ಲ ಸರ್ಜಿಕಲ್ ಸ್ಟ್ರೈಕ್ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಇತ್ತ ಪ್ರದಾನಿ ಮೋದಿ ವಿರುದ್ಧವೂ ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದಾರೆ. ಉಗ್ರರು ನರಕದಲ್ಲಿ ಅಡಗಿದ್ದರೂ ಅವರನ್ನ ಬೇಟೆಯಾಡುತ್ತೇವೆ ಎಂದು ಮೋದಿ ಹೇಳುತ್ತಾರೆ. ಹಾಗಿದ್ದರೆ ಉರಿ ಮತ್ತು ಪುಲ್ವಾಮಾದಲ್ಲಿ ದಾಳಿಯಾದಗ ಮೋದಿ ಎಲ್ಲಿ ಹೋಗಿದ್ದರು. ಏಕೆ ಇಂತಾ ದಾಳಿಗಳನ್ನ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.