ಬಿರ್ಭುಮ್ (ಪಶ್ಚಿಮ ಬಂಗಾಳ):ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯಲ್ಲಿ ಮಾ, ಮತಿ, ಮನುಷ್ ಘೋಷಣೆಗಳು ಈಗ ಅಸ್ತಿತ್ವದಲ್ಲಿಲ್ಲ. ಅದು ಈಗ ಕುಟುಂಬದ ಪಕ್ಷವಾಗಿ ಸೀಮಿತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ತಮ್ಮ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಮುಗಿಸಿ ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು.
ಓದಿ: ಕೋವಿಡ್ ವ್ಯಾಕ್ಸಿನೇಷನ್ ನಂತರ ಪೌರತ್ವ ಕಾಯ್ದೆಯ ನಿಯಮ ರೂಪುರೇಷೆ: ಅಮಿತ್ ಶಾ
ಪಶ್ಚಿಮ ಬಂಗಾಳದ 10 ಕೋಟಿ ಜನರ ಬಗ್ಗೆ ಕಾಳಜಿ ವಹಿಸುವ ಬದಲು, ಮಮತಾ ಬ್ಯಾನರ್ಜಿ ತನ್ನ ಸೋದರಳಿಯ (ಅಭಿಷೇಕ್ ಬ್ಯಾನರ್ಜಿ) ನನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆಡಳಿತದ ಸಂಪೂರ್ಣ ರಾಜಕೀಕರಣ, ರಾಜಕೀಯದ ಸಂಪೂರ್ಣ ಅಪರಾಧೀಕರಣ ಮತ್ತು ಭ್ರಷ್ಟಾಚಾರ ಎಂಬ ಮೂರು ಪ್ರವೃತ್ತಿಗಳು ಪಶ್ಚಿಮ ಬಂಗಾಳದಲ್ಲಿವೆ ಎಂದು ಅವರು ಟೀಕಿಸಿದರು.
ಪಶ್ಚಿಮ ಬಂಗಾಳದ ಜನರಿಗೆ ಬಿಜೆಪಿಯ 'ಆರ್ ನೋಯಿ ಎನೇ' (ಇನ್ನು ಅನ್ಯಾಯವಿಲ್ಲ) ಅಭಿಯಾನದೊಂದಿಗೆ ಸೇರಿಕೊಳ್ಳಲು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ನಾನು ಮನಃಪೂರ್ವಕವಾಗಿ ವಿನಂತಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.