ನವದೆಹಲಿ: ಸಿಎಎ ವಿರೋಧಿಸಿ ದೆಹಲಿಯ ಶಾಹೀನ್ ಬಾಗ್ನಲ್ಲಿ ತಿಂಗಳಿಗೂ ಹೆಚ್ಚು ಕಾಲದಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಪ್ರತಿಭಟನೆ ಹಲವು ಕಾರಣಗಳಿಂದ ದೇಶಾದ್ಯಂತ ಭಾರಿ ಸದ್ದುಮಾಡಿದೆ.
ಇಂದೂ ಕೂಡ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸಿಎಎ ಹಿಂಪಡೆಯುವಂತೆ ಆಗ್ರಹಿಸಿದ್ರು. ಅಲ್ಲದೇ ಮಾದ್ಯಮಗಳೊಂದಿಗೆ ಮಾತನಾಡಿದ ಕೆಲ ಪ್ರತಿಭಟನಾಕಾರರು 'ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಎ ವಿಚಾರ ಕುರಿತು ಚರ್ಚೆ ಮಾಡಲು ಇಡೀ ದೇಶದ ಜನರನ್ನ ಆಹ್ವಾನ ಮಾಡಿದ್ದಾರೆ. ನಾಳೆ 2 ಗಂಟೆಗೆ ಅವರನ್ನ ಭೇಟಿಯಾಗಲು ತೆರಳುತ್ತಿದ್ದೇವೆ. ಸಿಎಎಯಿಂದ ತೊಂದರೆ ಅನುಭವಿಸುತ್ತಿರುವ ಯಾರಾದರೂ ನಮ್ಮ ಜೊತೆ ಬರಬಹುದು'ಎಂದಿದ್ದರು.