ಭುವನೇಶ್ವರ: ಒಡಿಶಾದಲ್ಲಿ ಈಗಾಗಲೇ ಏಪ್ರಿಲ್ 30ರವರೆಗೆ ಲಾಕ್ಡೌನ್ ವಿಸ್ತರಿಸಿ ಘೋಷಣೆ ಮಾಡಲಾಗಿದ್ದು, ಇದರ ಮಧ್ಯೆ ಅಲ್ಲಿನ ಪೆಟ್ರೋಲ್ ಪಂಪ್ ಅಸೋಷಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿವೆ.
ಒಡಿಶಾದಲ್ಲಿನ ಪೆಟ್ರೋಲ್ ಪಂಪ್ಗಳಿಗೆ ಮಾಸ್ಕ್ ಹಾಕಿಕೊಳ್ಳದೇ ಬರುವ ಸವಾರರಿಗೆ ಪೆಟ್ರೋಲ್ & ಡಿಸೇಲ್ ನೀಡದಿರಲು ನಿರ್ಧರಿಸಿವೆ. ಮನೆಯಿಂದ ಹೊರಹೋಗಬೇಕಾದರೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಸ್ಕ್ ಹಾಕಿಕೊಳ್ಳದೇ ಪೆಟ್ರೋಲ್ - ಡೀಸೆಲ್ ಹಾಕಿಕೊಳ್ಳಲು ಹೋದರೆ ಅವರಿಗೆ ಹಾಕದಿರಲು ನಿರ್ಧರಿಸಿದೆ. ರಾಜ್ಯದಲ್ಲಿನ 1,600 ಪೆಟ್ರೋಲ್ ಪಂಪ್ಗಳು ಈ ನಿರ್ಧಾರ ಮಾಡಿವೆ ಎಂದು ಅಸೋಸಿಯೇಷನ್ ತಿಳಿಸಿದೆ.