ಮುಂಬೈ(ಮಹಾರಾಷ್ಟ್ರ):ಮಧ್ಯಪ್ರದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮಹಾರಾಷ್ಟ್ರಕ್ಕೂ ವ್ಯಾಪಿಸುತ್ತಾ. ಇಲ್ಲೂ ಕೂಡ ಬಿಜೆಪಿ ನಾಯಕರು ಆಪರೇಷನ್‌ಗೆ ಮುಂದಾಗ್ತಾರಾ? ಸದ್ಯ ಇಂತಹದೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಭಾರಿ ಕುತೂಹಲ ಮೂಡಿಸಿದೆ.
ಆಪರೇಷನ್ ಥಿಯೇಟರ್‌ನಲ್ಲಿ ನಮ್ಮಂಥ ಸರ್ಜನ್‌ಗಳು ಇರುವಾಗ ಆಪರೇಷನ್ ಕಮಲ ಹೇಗೆ ನಡೆಯುತ್ತೆ?: ಸಂಜಯ್ ರಾವತ್ - ಮಹಾರಾಷ್ಟ್ರ ಸರ್ಕಾರ
ಮಧ್ಯಪ್ರದೇಶಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಬರುವ ದಿನಗಳಲ್ಲಿ ಮಹಾರಾಷ್ಟ್ರದಲ್ಲೂ ಉದ್ಭವವಾಗಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಶಿವಸೇನಾ ಸಂಸದ ಸಂಜಯ್ ರಾವತ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಮುಂಬೈನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಮಹಾರಾಷ್ಟ್ರದಲ್ಲೂ ಸರ್ಕಾರ ರಚನೆ ಮಾಡಲು ಬಿಜೆಪಿ ಪ್ರಯತ್ನಿಸಿದೆ. ಆದ್ರೆ ಇದು ಸಫಲವಾಗಿಲ್ಲ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಆಪರೇಷನ್ ಥಿಯೇಟರ್‌ನಲ್ಲಿ ನಮ್ಮಂಥ ಸರ್ಜನ್‌ಗಳು ಇರುವವರಿಗೆ ಇಂತಹ ಯಾವುದೇ ಆಪರೇಷನ್‌ಗಳು ಮಹಾರಾಷ್ಟ್ರದಲ್ಲಿ ಸಕ್ಸಸ್ ಆಗುವುದಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಯಾರಾದ್ರೂ ಹಾಗೆ ಮಾಡಲು ಬಂದ್ರೆ ಅವರೇ ಆಪರೇಷನ್‌ಗೆ ಒಳಗಾಗ್ತಾರೆ ಅಂತ ಕೇಸರಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸದ್ಯ ಮಧ್ಯಪ್ರದೇಶದಲ್ಲಿ ರಾಜಕೀಯ ತುರ್ತು ಪರಿಸ್ಥಿತಿ ಇದೆ. ಆದ್ರೆ ಇದಕ್ಕೆ ಬಿಜೆಪಿ ಹೊಣೆ ಎಂದು ನಾನು ಹೇಳಲಾರೆ. ಕಾಂಗ್ರೆಸ್ ಪಕ್ಷದೊಳಗೆ ಅತೃಪ್ತಿ ಇದೆ. ಇದಕ್ಕೆ ಆ ಪಕ್ಷದ ಹಿರಿಯ ನಾಯಕರು ಜವಾಬ್ದಾರಿಯಾಗಿದ್ದು, ಶೀಘ್ರವೇ ಇದಕ್ಕೆ ಪರಿಹಾರ ಕೊಂಡುಕೊಳ್ಳಬೇಕಿದೆ ಎಂದು ಕೈ ನಾಯಕರಿಗೆ ಸಂಜಯ್ ರಾವತ್ ಸಲಹೆ ನೀಡಿದ್ದಾರೆ.