ನವದೆಹಲಿ:ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ನಿಂದಾಗಿ ಜನರು ಭಯಭೀತರಾಗಿದ್ದು, ಇತ್ತ ಭಾರತಕ್ಕೂ ಕೊವಿಡ್-19 ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆ ಕೊರೊನಾ ಹರಡುವ ಭೀತಿಯಿಂದಾಗಿ ಈ ಬಾರಿ ರಾಷ್ಟಪತಿ ಭವನದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಹೋಳಿ ಕೂಟ ಇರುವುದಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಹರಡುವ ಭೀತಿ: ರಾಷ್ಟ್ರಪತಿ ಭವನದಲ್ಲಿ ಈ ಬಾರಿ ಹೋಳಿ ಕೂಟವಿಲ್ಲ - president ramnath kovin
ಕೊರೊನಾ ಹರಡುವ ಭೀತಿಯಿಂದಾಗಿ ಈ ಬಾರಿ ರಾಷ್ಟಪತಿ ಭವನದಲ್ಲಿ ವರ್ಷಂಪ್ರತಿ ನಡೆಯಲಿರುವ ಸಾಂಪ್ರದಾಯಿಕ ಹೋಳಿ ಕೂಟ ಇರುವುದಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
![ಕೊರೊನಾ ಹರಡುವ ಭೀತಿ: ರಾಷ್ಟ್ರಪತಿ ಭವನದಲ್ಲಿ ಈ ಬಾರಿ ಹೋಳಿ ಕೂಟವಿಲ್ಲ president ramnath kovind](https://etvbharatimages.akamaized.net/etvbharat/prod-images/768-512-6296178-thumbnail-3x2-smk.jpg)
ರಾಷ್ಟ್ರಪತಿ ರಾಮನಾಥ್ ಕೋವಿಂದ್
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಕೊರೊನಾ ವೈರಸ್ ಹರಡದಂತೆ ನಾವು ಮುಂಜಾಗ್ರತೆ ವಹಿಸಬೇಕು. ಈ ಹಿನ್ನೆಲೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಹೋಳಿ ಕೂಟ ನಡೆಸುವುದಿಲ್ಲ ಎಂದು ಹೇಳಿದ್ದಾರೆ.