ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ವರ್ಷದ ಗಣರಾಜ್ಯೋತ್ಸವದ ಆಚರಣೆಗೆ ಮುಖ್ಯ ಅತಿಥಿಯಾಗಿ ಯಾವುದೇ ವಿದೇಶಿ ಗಣ್ಯರು ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಬಾರಿ ವಿದೇಶಿ ಮುಖ್ಯ ಅತಿಥಿಯಿಲ್ಲದೆ ಗಣರಾಜ್ಯೋತ್ಸವ ಕಾರ್ಯಕ್ರಮ - ಸಾಂಕ್ರಾಮಿಕ ರೂಪಾಂತರಿ ಕೊರೊನಾ
ಜಾಗತಿಕ ಕೋವಿಡ್-19 ಪರಿಸ್ಥಿತಿಯಿಂದಾಗಿ ಈ ವರ್ಷ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯಾವುದೇ ವಿದೇಶಿ ರಾಷ್ಟ್ರ ಮುಖ್ಯಸ್ಥರು ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಯಾವುದೇ ವಿದೇಶಿ ಅತಿಥಿ ಭಾಗವಹಿಸಲ್ಲ: ಕೇಂದ್ರ
ಇದಕ್ಕೂ ಮೊದಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಈ ವರ್ಷ ಮುಖ್ಯ ಅತಿಥಿಯಾಗಿ ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ, ಯುಕೆಯಲ್ಲಿ ಸಾವಿರಾರು ಜನರ ಮೇಲೆ ಸಾಂಕ್ರಾಮಿಕ ರೂಪಾಂತರಿ ಕೊರೊನಾ ಹರಡಿದ ನಂತರ ಅವರು ತಮ್ಮ ಭೇಟಿಯನ್ನು ರದ್ದುಗೊಳಿಸಿದರು.