ನವದೆಹಲಿ:ವಾತಾವರಣದಲ್ಲಿನ ತಾಪಮಾನದ ಬದಲಾವಣೆ ಮತ್ತು ಕೋವಿಡ್-19 ಹರಡುವಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹವಾಮಾನ ಸಂಶೋಧನಾ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಕೆಲದಿನಗಳಿಂದ ರಾಷ್ಟ್ರ ರಾಜಧಾನಿಯ ತಾಪಮಾನದಲ್ಲಿ ಸಾಕಷ್ಟು ಏರುಪೇರಾದ ಪರಿಣಾಮ ತಾಪಮಾನ ಕಡಿಮೆಯಾಗಿ ಪಾದರಸದಲ್ಲಿ ಹಠಾತ್ ಕುಸಿತ ಕಂಡು ಬಂದಿದೆ. ಕನಿಷ್ಠ ತಾಪಮಾನವು 1 ರಿಂದ 12 ಡಿಗ್ರಿ ಸೆಲ್ಸಿಯಸ್ ಸಮೀಪದಲ್ಲೇ ಸುಳಿದಾಡುತ್ತಿದೆ.
ಹೀಗಾಗಿ ರಾಜಧಾನಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿವರ ನೀಡಿದ ತಜ್ಞರು, ಭಯ ಪಡುವ ಅಗತ್ಯ ಇಲ್ಲ. ತಾಪಮಾನಕ್ಕೂ ಹಾಗೂ ವೈರಸ್ ಹರಡುವಿಕೆಗೂ ಸಂಬಂಧವಿಲ್ಲ ಎಂದು ಜನರಲ್ಲಿದ್ದ ಆತಂಕವನ್ನು ದೂರಮಾಡಿದ್ದಾರೆ.
ತಾಪಮಾನದಿಂದ ವೈರಸ್ ಹರಡಲು ಸಾಧ್ಯವಿಲ್ಲ. ಅದೇನಿದ್ದರೂ ಮಾನವ ಸಂಪರ್ಕದ ಮೂಲಕ ಮಾತ್ರವೇ ಕೋವಿಡ್-19 ಹರಡಲಿದೆ. ಜನರು ಆದಷ್ಟು ಸಾಮೂಹಿಕ ಸಭೆಗಳಿಂದ ದೂರುವಿದ್ದರೆ ಒಳ್ಳೆಯದು. ಅಲ್ಲದೇ, ಆಗಾಗ್ಗೆ ಕೈಯನ್ನು ಶುದ್ಧಗೊಳಿಸುತ್ತಿರಬೇಕು ಎಂದು ತಜ್ಞರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಏಮ್ಸ್ ಆಸ್ಪತ್ರೆಯ ನಿರ್ದೇಶಕ ರಂದೀಪ್ ಗುಲೇರಿಯಾ, ಗಾಳಿಯಲ್ಲಿನ ಆರ್ದ್ರತೆಯಿಂದ ವೈರಸ್ ಪರಿಣಾಮಕಾರಿಯಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ ಎಂದು ಸಂಶೋಧನೆಗಳು ತಿಳಿಸಿವೆ ಎಂದಿದ್ದಾರೆ. ಮತ್ತು ಕೆಲವರು ತಾಪಮಾನದಿಂದ ವೈರಸ್ ಹರಡುತ್ತದೆ ಎಂಬುದು ಶುದ್ಧ ಸುಳ್ಳು. ಅಂತ ಹೇಳಿಕೆಗಳಿಗೆ ಯಾರೂ ಕಿವಿಗೊಡಬಾರದು. ತಾಪಮಾನ ಏರಿಕೆ ವೈರಸ್ ಕೊಲ್ಲಲು ಸಹಾಯ ಮಾಡುತ್ತದೆ ಎಂದಲ್ಲಾ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಿಂಗಾಪುರದಂತಹ ಹೆಚ್ಚು ಉಷ್ಣವಲಯದ ದೇಶಗಳಲ್ಲೂ ಕೂಡ ಕೊರೊನಾ ವೈರಸ್ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.