ನವದೆಹಲಿ: ದೆಹಲಿಯ ನಿಜಾಮುದ್ದೀನ್ನ ಮರ್ಕಜ್ನಲ್ಲಿ ನಡೆದ ತಬ್ಲಿಘಿ ಜಮಾತ್ನಿಂದ ದೇಶದ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಾನಿಯುಂಟಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ಜಮಾತ್ನಲ್ಲಿ ಪಾಲ್ಗೊಂಡವರಿಂದ ತಮಿಳುನಾಡು (84%), ತೆಲಂಗಾಣ (79%), ದೆಹಲಿ (63%), ಉತ್ತರ ಪ್ರದೇಶ (59%) ಹಾಗೂ ಆಂಧ್ರ ಪ್ರದೇಶ (61%) ರಾಜ್ಯಗಳಿಗೆ ಹೆಚ್ಚು ಹಾನಿ ಸಂಭವಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದ್ದು, ಈ ಪೈಕಿ ಶೇ.29.8 ರಷ್ಟು ಅಂದರೆ 4,291 ಪ್ರಕರಣಗಳಿಗೆ ನಿಜಾಮುದ್ದೀನ್ ಮರ್ಕಜ್ ಮೂಲ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯುದರ್ಶಿ ಲಾವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.