ಚೆನ್ನೈ: ಸುಜಾತಾ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜ್‌ಕುಮಾರ್ ಬುಧವಾರ ಸಂಜೆ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ನೇತ್ರಶಾಸ್ತ್ರಜ್ಞ ರಾಜ್‌ಕುಮಾರ್ ಜನಸಾಮಾನ್ಯರಿಗೆ ಪರಿಣಾಮಕಾರಿ ಮತ್ತು ನವೀನ ಆರೋಗ್ಯ ಪರಿಹಾರಗಳನ್ನು ಒದಗಿಸುವ ಅವರ ತಂದೆ ಚಿನ್ನಿ ಕೃಷ್ಣನ್ ಕನಸನ್ನು ಸಾಕಾರಗೊಳಿಸುವ ಕಾರ್ಯ ಮಾಡುತ್ತಿದ್ದರು.
ಅವರ ತಂದೆ ಚಿನ್ನಿ ಕೃಷ್ಣನ್ ಕ್ಯಾವಿನ್‌ಕೇರ್ ಸ್ಥಾಪಿಸಿದ್ರೆ, ಡಾ. ರಾಜ್‌ಕುಮಾರ್ ಅವರು ಚೆನ್ನೈನಲ್ಲಿ ಸುಜಾತಾ ಬಯೋಟೆಕ್ ಪ್ರಾರಂಭಿಸಿದರು.
ಅವರು 'ವೆಲ್ವೆಟ್ ಶಾಂಪೂ' ಮತ್ತು 'ನಿವಾರಣ್ 90 ಕೆಮ್ಮು ಸೂತ್ರ'ಗಳನ್ನು ಹೊರತಂದರು. 68 ವರ್ಷಕ್ಕೆ ಸಿ.ಕೆ.ರಾಜ್‌ಕುಮಾರ್ ಮೃತಪಟ್ಟಿದ್ದು, ಇಬ್ಬರು ಪುತ್ರಿಯರು, ಒಬ್ಬ ಮಗ ಮತ್ತು ಹೆಂಡತಿಯನ್ನು ಅಗಲಿಸಿದ್ದಾರೆ.
ಡಾ. ರಾಜ್‌ಕುಮಾರ್ ನಿಧನಕ್ಕೆ ಗಣ್ಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.