ಕರ್ನಾಟಕ

karnataka

ETV Bharat / bharat

ಮುಜಾಫರ್​​ನಗರದ ಆಸ್ಪತ್ರೆಗೆ ನಿತೀಶ್ ಭೇಟಿ: ಬಿಹಾರ ಸಿಎಂಗೆ 'ಗೋ ಬ್ಯಾಕ್' ಬಿಸಿ! - ಶ್ರೀಕೃಷ್ಣ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ

ಬಿಹಾರದ ಮುಜಾಫರ್​​​ನಗರದಲ್ಲಿನ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ 89 ಮಕ್ಕಳು ಮೆದುಳು ಜ್ವರದಿಂದ ಸಾವನ್ನಪ್ಪಿದ್ದು, ಜ್ವರ ಬಾಧಿತ ಪ್ರದೇಶದಲ್ಲಿನ ಅಧ್ಯಯನ ನಡೆಸಿ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

ನಿತೀಶ್ ಕುಮಾರ್

By

Published : Jun 18, 2019, 5:34 PM IST

ಪಾಟ್ನಾ: ಮೆದುಳು ಜ್ವರದ ಪರಿಣಾಮ ಬಿಹಾರದಲ್ಲಿ ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ನಿತೀಶ್​​​ ಕುಮಾರ್ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ. ಈ ನಿಟ್ಟಿನಲ್ಲಿ ಇವತ್ತು ಆಸ್ಪತ್ರೆಗೆ ಭೇಟಿ ನೀಡಿದ ಅವರು, ಜ್ವರ ಬಾಧಿತ ಪ್ರದೇಶದಲ್ಲಿನ ಸಂಪೂರ್ಣ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶ್ರೀಕೃಷ್ಣ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕೇವಲ 610 ಬೆಡ್​​ಗಳಿದ್ದು, ಈ ಸಂಖ್ಯೆಯನ್ನು 2,500ಕ್ಕೆ ಹೆಚ್ಚಳ ಮಾಡುವಂತೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ 1500 ಬೆಡ್​ಗಳನ್ನು ತಕ್ಷಣವೇ ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದು, ಮಕ್ಕಳ ಪೋಷಕರು ಹಾಗೂ ಸಂಬಂಧಿಕರಿಗಾಗಿ ಧರ್ಮಶಾಲೆ (ವಿಶೇಷ ವಸತಿ ವ್ಯವಸ್ಥೆ)ಯನ್ನು ನಿರ್ಮಿಸಲು ಸೂಚಿಸಲಾಗಿದೆ ಸಿಎಂ ನಿತೀಶ್ ಕುಮಾರ್ ಹೇಳಿದರು.

'ಗೋ ಬ್ಯಾಕ್ ನಿತೀಶ್'​

ಮುಜಾಫರ್​ನಗರದಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಬಿಹಾರ ಸಿಎಂ ನಿತೀಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ. ಕಳೆದ ಹದಿನೇಳು ದಿನಗಳಿಂದ ಮೆದುಳು ಜ್ವರದಿಂದ ಇಲ್ಲಿನ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ.

ಸಿಎಂ ನಿತೀಶ್ ಕುಮಾರ್ ವಿರುದ್ಧ ಗೋ ಬ್ಯಾಕ್ ಘೋಷಣೆ

ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಹಾರ ಸಿಎಂಗೆ ಮಕ್ಕಳ ಪೋಷಕರು ಹಾಗೂ ಸಂಬಂಧಿಕರು 'ಗೋ ಬ್ಯಾಕ್' ಎನ್ನುವ ಮೂಲಕ ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ಇಲ್ಲಿಯವರೆಗೆ 126 ಮಕ್ಕಳು ಸಾವನ್ನಪ್ಪಿದ್ದರೆ ಮುಜಾಫರ್​ನಗರದಲ್ಲಿ ಮಾತ್ರವೇ 107 ಸಾವಿನ ಪ್ರಕರಣಗಳು ವರದಿಯಾಗಿವೆ.

ABOUT THE AUTHOR

...view details