ಕರ್ನಾಟಕ

karnataka

ETV Bharat / bharat

ಸರ್ಕಾರದಲ್ಲಿ 'ಸಕಾರಾತ್ಮಕ ಮನೋಭಾವ-ನಿರ್ಧಾರ ತೆಗೆದುಕೊಳ್ಳುವ ಶಕ್ತಿ' ಅಗತ್ಯ: ನಿತಿನ್​​ ಗಡ್ಕರಿ

ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಆದರೆ ನಿರ್ಧಾರ ತೆಗೆದುಕೊಳ್ಳುವ ಸಕಾರಾತ್ಮಕ ಮನೋಭಾವ ಹಾಗು ಸಾಮರ್ಥ್ಯ ಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Nitin Gadkari stresses on need for positive mindset,ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅಗತ್ಯ ನಿತಿನ್ ಗಡ್ಕರಿ
ಛತ್ರಪತಿ ಮೈದಾನದಲ್ಲಿ ಕ್ರಿಕೆಟ್ ಆಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

By

Published : Jan 20, 2020, 9:10 AM IST

ನಾಗ್ಪುರ(ಮಹಾರಾಷ್ಟ್ರ):ಸರ್ಕಾರದಲ್ಲಿ ಸಕಾರಾತ್ಮಕ ಮನಸ್ಥಿತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೊಂದುವ ಅಗತ್ಯವಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಬಾರಿ ಕನಿಷ್ಠ 5 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಮೂಲ ಸೌಕರ್ಯ ಕ್ಷೇತ್ರದಲ್ಲಿ ಮಾಡಲು ಬಯಸುತ್ತೇನೆ ಎಂದಿದ್ದಾರೆ. ಅಲ್ಲದೆ ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಆದರೆ ನಿರ್ಧಾರ ತೆಗೆದುಕೊಳ್ಳುವ ಸಕಾರಾತ್ಮಕ ಮನೋಭಾವ ಹಾಗೂ ಸಾಮರ್ಥ್ಯದ ಅಗತ್ಯವಿದೆ ಎಂದಿದ್ದಾರೆ.

ಶುಕ್ರವಾರ ನಾನು ಒಂದು ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲೊಬ್ಬರು ಮಾತನಾಡುತ್ತಾ, ನಾವು ಅದನ್ನ ಮಾಡುತ್ತೇವೆ, ಇದನ್ನ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಅದಕ್ಕೆ ಅವರಿಗೆ ಹೇಳಿದೆ. ನಿಮಗೆ ಅಷ್ಟೊಂದು ಸಾಮರ್ಥ್ಯವಿದ್ದರೆ ನಿವೇಕೆ ಐಎಎಸ್ ಅಧಿಕಾರಿಯಾಗಿದ್ದೀರಾ? ಒಂದು ವ್ಯಾಪಾರ ಶುರು ಮಾಡಿ, ಅದನ್ನ ಮಾಡಲು ಸಾಮರ್ಥ್ಯ ಇರುವವರನ್ನ ಬೆಳೆಸಿ ಎಂದು ಉತ್ತರಿಸಿದೆ ಎಂದಿದ್ದಾರೆ.

ಛತ್ರಪತಿ ಮೈದಾನದಲ್ಲಿ ಕ್ರಿಕೆಟ್ ಆಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ನಿತಿನ್ ಗಡ್ಕರಿ ನಾಗ್ಪುರದಲ್ಲಿ ಕ್ರಿಡಾ ಮಹೋತ್ಸವದ ಅಂಗವಾಗಿ ನಗರದ ವಿವಿಧ ಮೈದಾನಗಳಿಗೆ ಭೇಟಿ ನೀಡುವ ಮೂಲಕ ಕ್ರೀಡಾಪಟುಗಳನ್ನ ಹುರಿದುಂಬಿಸಿದ್ದು, ಛತ್ರಪತಿ ಮೈದಾನದಲ್ಲಿ ತಾವೇ ಕ್ರಿಕೆಟ್ ಆಡಿದ್ದಾರೆ.

ABOUT THE AUTHOR

...view details