ಕರ್ನಾಟಕ

karnataka

ETV Bharat / bharat

ಮಹಾಮಾರಿ ಕೊರೊನಾ ವಿಚಾರವಾಗಿ ನಿತ್ಯಾನಂದ ಹೇಳಿದ್ರು ಈ ಮಾತು! - ಮಹಾಮಾರಿ ಕೊರೊನಾ

ಮಹಾಮಾರಿ ಕೊರೊನಾ ಈಗಾಗಲೇ ಪ್ರಪಂಚದಾದ್ಯಂತ ಭಯ ಹುಟ್ಟಿಸಿದ್ದು, ಸಾವಿರಾರು ಜನರ ಪ್ರಾಣ ಬಲಿ ಪಡೆದುಕೊಂಡಿದೆ. ಇದೇ ವಿಷಯವಾಗಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಮಾತನಾಡಿದ್ದು, ಅಪಹಾಸ್ಯ ಮಾಡುವ ಕೆಲಸ ಮಾಡಿದ್ದಾರೆ.

Nithyananda has talked about the COVID-19
Nithyananda has talked about the COVID-19

By

Published : Mar 17, 2020, 1:31 AM IST

ನವದೆಹಲಿ:ಮಹಾಮಾರಿ ಕೊರೊನಾ ಭೀತಿಯಿಂದ ಜನರು ಮನೆಯಿಂದ ಹೊರಗಡೆ ಹೋಗಲು ಭಯ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಚೀನಾದಲ್ಲಿ ಹುಟ್ಟಿ ವಿವಿಧ ದೇಶಗಳಿಗೆ ಲಗ್ಗೆ ಹಾಕಿರುವ ಡೆಡ್ಲಿ ವೈರಸ್​ ಇದೀಗ ಭಾರತದಲ್ಲೂ ಭಯ ಹುಟ್ಟಿಸಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಿತ ದೇವಮಾನವ ನಿತ್ಯಾನಂದ ತಮ್ಮ ಅಭಿಪ್ರಾಯ ಹೊರಹಾಕಿದ್ದು, ನಾನು ಕೈಲಾಸ ರಾಷ್ಟ್ರ ನಿರ್ಮಾಣ ಮಾಡಿ ಹೊಸ ದೇಶ ಎಂದು ಘೋಷಣೆ ಮಾಡಿದಾಗ ಅನೇಕ ದೇಶಗಳು ನನ್ನನ್ನು ಅಪಹಾಸ್ಯ ಮಾಡಿದ್ದವು. ಆದರೆ ಇದೀಗ ಕೊರೊನಾ ವೈರಸ್​ ಭೀತಿಯಿಂದಾಗಿ ವಿಶ್ವವೇ ಏಕಾಂಗಿಯಾಗಿ(ಪ್ರತ್ಯೇಕವಾಗಿ) ಬದುಕುವ ಸ್ಥಿತಿ ನಿರ್ಮಾಣಗೊಂಡಿದೆ. ಒಬ್ಬರ ನಡುವೆ ಮತ್ತೊಬ್ಬರು ಅಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಉದ್ಭವವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದರ ಜತೆಗೆ ಕೊರೊನಾ ವಿಚಾರದಲ್ಲಿ ಖುದ್ದಾಗಿ ದೇವರೇ ನಮ್ಮನ್ನು ಕಾಪಾಡಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ. ಭಾರತದಿಂದ ಕಳೆದ ಕೆಲ ದಿನಗಳ ಹಿಂದೆ ನಿಗೂಢವಾಗಿ ಪರಾರಿಯಾಗಿದ್ದ ವಿವಾದಿತ ನಿತ್ಯಾನಂದ ಸ್ವತಂತ್ರ ಹಿಂದೂ ರಾಷ್ಟ್ರ ಕೈಲಾಸ ನಿರ್ಮಾಣ ಮಾಡಿದ್ದಾನೆ ಎಂಬ ಸುದ್ದಿ ವೈರಲ್​ ಆಗಿತ್ತು.

ABOUT THE AUTHOR

...view details