ರಾಯ್‌ಪುರ (ಛತ್ತೀಸ್ಗಡ): ಕೊರೊನಾ ವೈರಸ್ ಕಾಡ್ಗಿಚ್ಚಿನಂತೆ ಪ್ರಪಂಚದಾದ್ಯಂತ ಹರಡುತ್ತಿದೆ. ಸೋಂಕು ಇರುವವರು ನಮ್ಮ ಸುತ್ತ ಮುತ್ತ ಸುಳಿದಾಡುತ್ತಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ. ಹೀಗಾಗಿಯೇ ಕಾಯಿಲೆ ಹರಡುತ್ತಾ ಹೋಗುತ್ತಿದೆ.
ಈ ಬಿಕ್ಕಟ್ಟಿನ ಪರಿಸ್ಥಿತಿ ಸುಧಾರಿಸಲು ರಾಯ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಅಪ್ಲಿಕೇಷನ್ ಕೋವಿಡ್-19 ಪಾಸಿಟಿವ್ ಆಗಿದ್ದು, ನಿಕಟ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಸಂಶೋಧನಾ ತಂಡದಲ್ಲಿ ಅಮನ್ ವರ್ಮಾ, ಆಯುಷ್ ಗನುಲಿ, ಅಮ್ಮರ್ ಅಲ್ವಿ, ಆರ್ಯನ್ ಸರ್ಕಾರ್ ಮತ್ತು ಕೌಶಿಕ್ ಮಿಶ್ರಾ ಎಂಬ ಐವರು ವಿದ್ಯಾರ್ಥಿಗಳು ಇದ್ದಾರೆ.