ಅಯೋಧ್ಯೆ:ಅಯೋಧ್ಯೆ ಭೂವಿವಾದ ಪ್ರಕರಣದ ಭಾಗಿದಾರರಲ್ಲಿ ಒಂದಾದ ನಿರ್ಮೋಹಿ ಅಖಾರ, ತನ್ನ ಉನ್ನತ ಮಟ್ಟದ ಸಭೆ ನಡೆಸಿ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಚರ್ಚಿಸಿ ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರದ ಕುರಿತು ಸಮಾಲೋಚನೆ ನಡೆಸಿದೆ.
ಅಯೋಧ್ಯೆ ತೀರ್ಪಿನ ಬಳಿಕ ನಿರ್ಮೋಹಿ ಅಖಾರನ ಮೊದಲ ಸಭೆ..! - ನಿರ್ಮೋಹಿ ಅಖಾರ
ನಿರ್ಮೋಹಿ ಅಖಾರ ಮುಖ್ಯಸ್ಥ ಮಹಂತ್ ದಿನೇಂದ್ರ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಪಂಚ್ ರಾಜಾ ರಾಮ್ಚಂದ್ರ ದಾಸ್ ಭಾಗವಹಿಸಿದ್ದರು. ಸಭೆಯಲ್ಲಿ ನಿರ್ಮೋಹಿ ಅಖಾರದ ಎಲ್ಲಾ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ನಿರ್ಮೋಹಿ ಅಖಾರ ಮುಖ್ಯಸ್ಥ ಮಹಂತ್ ದಿನೇಂದ್ರ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಪಂಚ್ ರಾಜಾ ರಾಮ್ಚಂದ್ರ ದಾಸ್ ಭಾಗವಹಿಸಿದ್ದರು. ಸಭೆಯಲ್ಲಿ ನಿರ್ಮೋಹಿ ಅಖಾರದ ಎಲ್ಲಾ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಅಯೋಧ್ಯೆ ರಾಮ್ ಮಂದಿರ ನಿರ್ಮಿಸಲು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಚರ್ಚಿಸಲು ನಾವು ಸಭೆ ನಡೆಸಿದ್ದೇವೆ. ನಾವು ತೀರ್ಪನ್ನು ಸ್ವಾಗತಿಸುತ್ತೇವೆ. ಆದರೆ ಸುಪ್ರೀಂಕೋರ್ಟ್ ಹಲವು ವಿಷಯಗಳ ಬಗ್ಗೆ ನಿಲುವು ತೆಗೆದುಕೊಳ್ಳಲಿಲ್ಲ. ಹೀಗಾಗಿ, ಈ ವಿಷಯಗಳ ಬಗ್ಗೆ ಚರ್ಚಿಸಿದ್ದು, ತೆಗದುಕೊಳ್ಳಬೇಕಾದ ರೂಪುರೆಷಗಳನ್ನು ಯೋಜಿಸಲಿದ್ದೇವೆ ಎಂದು ಓರ್ವ ಸರ್ಪಂಚ್ ತಿಳಿಸಿದ್ದಾರೆ.