ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ವಿವಾದ್ ಸೇ ವಿಶ್ವಾಸ್ ಎಂಬ ಯೋಜನೆ ಪರಿಚಯ ಮಾಡಲಿದ್ದು, ಇದರಿಂದ ಡೈರೆಕ್ಟ್ ಟ್ಯಾಕ್ಸ್ ಬಿಲ್ ಪಾವತಿದಾರರಿಗೆ ಸಹಾಯವಾಗಲಿದೆ. ನೇರ ತೆರಿಗೆಯಲ್ಲಿನ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಈ ಬಿಲ್ ಪರಿಚಯಿಸಲು ವಿತ್ತ ಸಚಿವೆ ಮುಂದಾಗಿದ್ದು, ಈಗಾಗಲೇ ಮಂಡನೆಯಾಗಿರುವ ಬಜೆಟ್ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿವಾದ್ ಸೇ ವಿಶ್ವಾಸ್... ನೇರ ತೆರಿಗೆ ಸಮಸ್ಯೆ ಬಗೆಹರಿಸಲು ಹೊಸ ಬಿಲ್ ಮಂಡಿಸಲಿರುವ ಸಚಿವೆ ನಿರ್ಮಲಾ! - ವಿವಾದ್ ಸೇ ವಿಶ್ವಾಸ್
ಕೇಂದ್ರ ಸರ್ಕಾರ ವಿವಾದ್ ಸೇ ವಿಶ್ವಾಸ್ ಯೋಜನೆಯನ್ನು ತೆರಿಗೆ ಪಾವತಿದಾರರಿಗೆ ನೀಡುತ್ತಿದ್ದು, ಕಾನೂನು ತೊಡಕು, ಇತ್ಯಾದಿ ತಕರಾರುಗಳನ್ನು ಬಗೆಹರಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.
ತೆರಿಗೆ ವ್ಯಾಜ್ಯಗಳನ್ನ ಕಡಿತಗೊಳಿಸುವ ಉದ್ದೇಶದಿಂದ ಬಜೆಟ್ನಲ್ಲಿ ವಿವಾದ್ ಸೇ ವಿಶ್ವಾಸ್ ಎಂಬ ಯೋಜನೆ ಪ್ರಕಟಿಸಲಾಗಿದೆ. ಇದರ ಪ್ರಕಾರ ತೆರಿಗೆದಾರರು ತೆರಿಗೆ ಮೊತ್ತ ಪಾವತಿಸಿದರೆ ಅವರಿಗೆ ದಂಡ ಹಾಗೂ ಬಡ್ಡಿಯಿಂದ ವಿನಾಯಿತ ಸಿಗಲಿದೆ. ನೋಟ್ ಬ್ಯಾನ್ ವೇಳೆ ಭಾರೀ ಮೊತ್ತದ ಹಣವನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿ, ಹಣದ ಮೂಲ ತಿಳಿಸಲಾಗದ ಕಾರಣ, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆದು ಸಂಕಷ್ಟಕ್ಕೆ ಸಿಲುಕೊಂಡಿರುವವರು ಈ ಯೋಜನೆಯಿಂದ ಪಾರಾಗಬಹುದಾಗಿದೆ.
ಈಗಾಗಲೇ 2020-21ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಿದ್ದು, ತೆರಿಗೆಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.