ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಏಕಕಾಲದಲ್ಲಿ ಮರಣದಂಡನೆ ಜಾರಿಯಾಗಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ. ಇದನ್ನು ಪ್ರಶ್ನಿಸಿ ಕೇಂದ್ರವು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾರ್ಚ್ 23 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಅಪರಾಧಿಗಳು ತಮ್ಮೆಲ್ಲಾ ಕಾನೂನು ಪರಿಹಾರ ಮಾರ್ಗಗಳನ್ನು ಬಳಸಿದ್ದಾರೆ. ಇಂದು ದೆಹಲಿ ವಿಚಾರಣಾ ನ್ಯಾಯಾಲಯ ಮಾರ್ಚ್ 20ಕ್ಕೆ ಗಲ್ಲು ದಿನಾಂಕ ನಿಗದಿಪಡಿಸಿದೆ ಎಂದು ನ್ಯಾಯಮೂರ್ತಿ ಆರ್. ಬಾನುಮತಿ ನೇತೃತ್ವದ ನ್ಯಾಯಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.