ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಒಂದು ತಿಂಗಳೊಳಗೆ ಗಲ್ಲಿಗೇರಿಸಬೇಕು ಹಾಗೂ ಮರಣದಂಡನೆಯ ದೃಶ್ಯವನ್ನು ನೇರಪ್ರಸಾರ ಮಾಡಬೇಕೆಂದು ಕೋರಿ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ನಿರ್ಭಯಾ ಅಪರಾಧಿಗಳ ಮರಣದಂಡನೆಯ 'ನೇರ ಪ್ರಸಾರ' ಕೋರಿ ಸುಪ್ರೀಂಗೆ PIL - ನಿರ್ಭಯಾ ಅಪರಾಧಿಗಳ ಮರಣದಂಡನೆ ಕುರಿತ ಸುದ್ದಿ
ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವುದನ್ನು ನೇರ ಪ್ರಸಾರ ಮಾಡುವಂತೆ ಹಾಗೂ ನಿರ್ಭಯಾ ಕುಟುಂಬಸ್ಥರಿಗೆ ನೇರವಾಗಿ ಮರಣದಂಡನೆಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡಿ ಎಂದು ಕೋರಿ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಡಿಸೆಂಬರ್ 17 ರಂದು ಸುಪ್ರೀಂ ಕೋರ್ಟ್, ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಸಿಂಗ್ ಅವರ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಲಿದ್ದು, ಅಪರಾಧಿಗಳ ಕ್ಷಮಾದಾನ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಒಂದು ತಿಂಗಳೊಳಗಾಗಿ ಗಲ್ಲಿಗೇರಿಸುವ ಕುರಿತು ಡೆತ್ ವಾರೆಂಟ್ ನೀಡುವಂತೆ PIL ನಲ್ಲಿ ಹೇಳಲಾಗಿದೆ.
ಅಲ್ಲದೇ ಬಹುಮುಖ್ಯವಾಗಿ ಅಪರಾಧಿಗಳನ್ನು ಗಲ್ಲಿಗೇರಿಸುವುದನ್ನು ನೇರಪ್ರಸಾರ ಮಾಡುವಂತೆ ಹಾಗೂ ನಿರ್ಭಯಾ ಕುಟುಂಬಸ್ಥರಿಗೆ ನೇರವಾಗಿ ಮರಣದಂಡನೆಯನ್ನು ವೀಕ್ಷಿಸಲು (ಯುಎಸ್ಎ ಮಾದರಿಯಲ್ಲಿ) ಅವಕಾಶ ಮಾಡಿಕೊಡಿ ಎಂದು ಅರ್ಜಿಯಲ್ಲಿ ಕೋರಲಾಗಿದೆ.