ನವದೆಹಲಿ: ನಿರ್ಭಯಾ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದಿರುವ ನಾಲ್ವರು ಅಪರಾಧಿಗಳಿಗೆ ಏಳು ದಿನಗಳೊಳಗೆಮರಣದಂಡನೆ ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ. ಈ ಅಪರಾಧಿಗಳುರಾಷ್ಟ್ರಪತಿಗಳ ಮುಂದೆ ಸುಪ್ರೀಂ ತೀರ್ಪಿನ ಬಗ್ಗೆ ಮರು ಪರಿಶೀಲಿಸುವಂತೆ ಇಲ್ಲವೆ ಕ್ಷಮಾಪಣೆ ಬಗ್ಗೆ ರಾಷ್ಟ್ರಪತಿಗೆ ಮನವಿ ಸಲ್ಲಿಸದಿದ್ದರೆ ಶೀಘ್ರದಲ್ಲೇ ಗಲ್ಲಿಗೆ ಹಾಕಲಾಗುವುದು ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಅಪರಾಧಿಗಳಲ್ಲಿ ಮೂವರು ತಿಹಾರ್ ಜೈಲಿನಲ್ಲಿದ್ದು, ಇನ್ನೋರ್ವ ಅಪರಾಧಿ ಮಾಂಡೋಲಿಯ ಕಾರಾಗೃಹದಲ್ಲಿದ್ದಾನೆ. ಅಪರಾಧಿಗಳಿಗೆ ದೆಹಲಿ ಹೈಕೋರ್ಟ್ ನೀಡಿದ್ದ ಮರಣ ದಂಡನೆ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂದು ತಿಹಾರ್ ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯೆಲ್ ತಿಳಿಸಿದರು.
ಅಪರಾಧಿಗಳು ತಮಗೆ ವಿಧಿಸಿರುವ ಮರಣದಂಡನೆಯನ್ನು ಪ್ರಶ್ನಿಸಿ ಅಥವಾ ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಅರ್ಜಿ ಸಲ್ಲಿಸಬಹುದು. ಆದರೆ, ಈ ಅಪರಾಧಿಗಳು ಶಿಕ್ಷೆಯ ಪರಿಶೀಲನೆಗೆ ಕೋರಿಲ್ಲ. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವಂತೆ ಕ್ಷಮಾಧಾನ ಪತ್ರವನ್ನು ರಾಷ್ಟ್ರಪತಿಗಳಿಗೆ ಕೋರವ ಅವಕಾಶವಿದೆ. ಇದ್ಯಾವುದನ್ನೂ ಅಪರಾಧಿಗಳು ಮಾಡಿಲ್ಲ.