ನವದೆಹಲಿ: ಬಿಗಿ ಭದ್ರತೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿದ್ದರೂ, ನಿರ್ಭಯಾ ಪ್ರಕರಣದ ಅಪರಾಧಿ ವಿನಯ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ನಿರ್ಭಯಾ ಪ್ರಕರಣದ ಅಪರಾಧಿ!?
ನಿರ್ಭಯಾ ಪ್ರಕರಣದ ಅಪರಾಧಿ ವಿನಯ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಜೈಲು ಮೂಲಗಳು ಮತ್ತು ವಿನಯ್ ಅವರ ವಕೀಲ ಎ.ಪಿ ಸಿಂಗ್ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆದರೆ, ತಿಹಾರ್ ಜೈಲು ವಕ್ತಾರ ಐ.ಜಿ.ರಾಜ್ ಕುಮಾರ್ ಈ ಘಟನೆಯನ್ನ ನಿರಾಕರಿಸಿದ್ದಾರೆ.
ಆದರೆ ಮೂಲದ ಪ್ರಕಾರ, ವಿನಯ್ ಇರುವ ಜೈಲಿನ ನಾಲ್ಕನೇ ಕೊಠಡಿಗೆ ಬೀಗ ಹಾಕಲಾಗಿತ್ತು. ಆತನಿದ್ದ ಕೊಠಡಿ ಮತ್ತು ಶೌಚಾಲಯಕ್ಕೆ ಒಂದು ಪರದೆ ಹಾಕಲಾಗಿದೆ. ಅದರ ಸಹಾಯದಿಂದ ಜೈಲು ಕೊಠಡಿಯಲ್ಲಿರುವ ಒಂದು ಕಬ್ಬಿಣದ ತುಂಡಿಗ ನೇಣು ಬಿಗಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಅದರ ಎತ್ತರ 5 ರಿಂದ 6 ಅಡಿ ಇದ್ದಿದ್ದರಿಂದ ನೇಣು ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.