ಕರ್ನಾಟಕ

karnataka

ETV Bharat / bharat

ನಿರ್ಭಯಾ ಹಂತಕರಿಗೆ ಪರೀಕ್ಷಾರ್ಥ ಗಲ್ಲು ಶಿಕ್ಷೆ ಯಶಸ್ವಿ... ಹೇಗಿದೆ ಹಂತಕರ ಮಾನಸಿಕ ಸ್ಥಿಮಿತ..? - ನಿರ್ಭಯಾ ಅತ್ಯಾಚಾರಿಗಳಿಗೆ ಮರಣದಂಡನೆ

ದೆಹಲಿ ನ್ಯಾಯಾಲಯವು ನಿರ್ಭಯಾ ಅತ್ಯಾಚಾರಿ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು. ಇದಕ್ಕಾಗಿ ಜೈಲು ಅಧಿಕಾರಿಗಳು ನಾಲ್ವರು ಅಪರಾಧಿಗಳಿಗೆ ನಕಲಿ ಮರಣದಂಡನೆಯನ್ನು ಯಶಸ್ವಿಯಾಗಿ ನಡೆಸಿದೆ. ಅಪರಾಧಿಗಳ ತೂಕಕ್ಕೆ ಅನುಗುಣವಾಗಿ ಅವಶೇಷಗಳು ಮತ್ತು ಕಲ್ಲುಗಳಿಂದ ತುಂಬಿದ ಚೀಲಗಳನ್ನು ಬಳಸಿ ನಕಲು ಕೃತಿಗಳನ್ನು ರಚಿಸಲಾಗಿತ್ತು.

Nirbhaya gangrape case
ನಿರ್ಭಯಾ ಪ್ರಕಾರಣದ ಆರೋಪಿಗಳು

By

Published : Jan 13, 2020, 6:09 AM IST

ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಗಲ್ಲು ಶಿಕ್ಷೆಯ ನಕಲಿ ಮರಣದಂಡನೆಯನ್ನು ತಿಹಾರ್ ಜೈಲಿನಲ್ಲಿ ನಡೆಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ನ್ಯಾಯಾಲಯವು ನಿರ್ಭಯಾ ಅತ್ಯಾಚಾರಿ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್(32), ಪವನ್ ಗುಪ್ತಾ(25 ), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್(31) ಅವರಿಗೆ ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು.

ಜೈಲು ಅಧಿಕಾರಿಗಳ ತಂಡವು ನಾಲ್ವರು ಅಪರಾಧಿಗಳಿಗೆ ನಕಲಿ ಮರಣದಂಡನೆಯನ್ನು ಯಶಸ್ವಿಯಾಗಿ ನಡೆಸಿದೆ. ಅಪರಾಧಿಗಳ ತೂಕಕ್ಕೆ ಅನುಗುಣವಾಗಿ ಅವಶೇಷಗಳು ಮತ್ತು ಕಲ್ಲುಗಳಿಂದ ತುಂಬಿದ ಚೀಲಗಳನ್ನು ಬಳಸಿ ನಕಲು ಕೃತಿಗಳನ್ನು ರಚಿಸಲಾಗಿತ್ತು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಾಲ್ವರು ಅಪರಾಧಿಗಳನ್ನು ಏಕಕಾಲದಲ್ಲಿ ಗಲ್ಲಿಗೇರಿಸುವ ಸಾಧ್ಯತೆಯಿದೆ. ಜೈಲು ಅಧಿಕಾರಿಗಳು ಸಹ ಅಪರಾಧಿಗಳೊಂದಿಗೆ ಪ್ರತಿದಿನವೂ ಸಂಭಾಷಣೆ ನಡೆಸುತ್ತಿದ್ದಾರೆ. ಎಲ್ಲರ ಮಾನಸಿಕ ಸ್ಥಿಮಿತೆ ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ABOUT THE AUTHOR

...view details