ನವದೆಹಲಿ:ನಿರ್ಭಯಾ ಪ್ರಕರಣದ ಅಪರಾಧಿಯಲ್ಲೊಬ್ಬನಾದ ವಿನಯ್ ಪಟಿಯಾಲ್ ಕೋರ್ಟ್ ಹೊರಡಿಸಿರುವ ಡೆತ್ ವಾರಂಟ್ ಹಾಗೂ ಮರಣದಂಡನೆ ತೀರ್ಪು ಮರುಪರಿಶೀಲಿಸಿ ಸುಪ್ರೀಂಕೋರ್ಟ್ಗೆ ಅಂತಿಮ ಕ್ಯುರೇಟಿವ್ ಅರ್ಜಿಯನ್ನ ಸಲ್ಲಿಕೆ ಮಾಡಿದ್ದಾನೆ.
ಗಲ್ಲುಶಿಕ್ಷೆ ಪ್ರಶ್ನಿಸಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ ಅಪರಾಧಿ ವಿನಯ್ - ನಿರ್ಭಯ ಪ್ರಕರಣದ ಆರೋಪಿ
ನಿರ್ಭಯ ಪ್ರಕರಣದ ಅಪರಾಧಿಗಳಿಗೆ ಈಗಾಗಲೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ್ದು, ಈ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ಆರೋಪಿ ವಿನಯ್ ಕುಮಾರ್ ಸುಪ್ರೀಂಕೋರ್ಟ್ಗೆ ಅಂತಿಮ ಅರ್ಜಿ ಸಲ್ಲಿಸಿದ್ದಾನೆ.
ದೆಹಲಿ, ನ್ಯಾಯಾಲಯವು ಜನವರಿ 7ರಂದು ಈ ಬಗ್ಗೆ ತೀರ್ಪು ನೀಡಿ, ನಿರ್ಭಯಾ ಪ್ರಕರಣದ ಎಲ್ಲ ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿ ಮಾಡಿದ್ದು, ಇದೇ ತಿಂಗಳು 22ರಂದು ಗಲ್ಲಿಗೇರಿಸಲು ದಿನಾಂಕ ನಿಗದಿ ಮಾಡಿ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಅಪರಾಧಿಗಳಲ್ಲೊಬ್ಬನಾದ ವಿನಯಕುಮಾರ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ. ಕ್ಯುರೇಟಿವ್ ಅರ್ಜಿ ಸಲ್ಲಿಕೆ ಹಿನ್ನೆಲೆ, 22ರ ಮರಣದಂಡನೆ ದಿನಾಂಕ ನಿಗದಿ ಅನಿಶ್ಚಿತತೆಗೆ ಸಿಲುಕಲಿದೆ. ಅಷ್ಟರೊಳಗೆ ಸುಪ್ರೀಂಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದರೆ, ಹಾಗೂ ಅರ್ಜಿ ವಜಾ ಮಾಡಿದರೆ ಮಾತ್ರ ಕೆಳ ನ್ಯಾಯಾಲಯ ನಿಗದಿ ಮಾಡಿದ ದಿನದಂತೆ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗುವುದು. ಒಂದೊಮ್ಮೆ ಅರ್ಜಿ ವಿಚಾರಣೆ ವಿಳಂಬವಾದರೆ ಮರಣದಂಡನೆ ಪ್ರಕ್ರಿಯ ಮುಂದೂಡುವ ಸಾಧ್ಯತೆಗಳಿವೆ.