ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ನ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವ ವಿಚಾರವಾಗಿ ದೆಹಲಿ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಅಪರಾಧಿ ಮುಖೇಶ್ ಸಿಂಗ್ನನ್ನು 2012ರ ಡಿ.17 ರಂದು ರಾಜಸ್ಥಾನದಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಯಿತು. ಅತ್ಯಾಚಾರ ನಡೆದ ದಿನ, ಅಂದರೆ ಡಿ.16 ರಂದು ಆತ ಘಟನೆ ನಡೆದ ಸ್ಥಳದಲ್ಲೇ ಇರಲಿಲ್ಲ. ಹೀಗಾಗಿ ಮುಖೇಶ್ನ ಮರಣ ದಂಡನೆ ಶಿಕ್ಷೆಯನ್ನು ರದ್ದು ಮಾಡಬೇಕು ಎಂದು ಅಪರಾಧಿ ಪರ ವಕೀಲ ದೆಹಲಿ ಕೋರ್ಟ್ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ಅಲ್ಲದೇ ತಿಹಾರ್ ಜೈಲು ಒಳಗಡೆ ಆತನಿಗೆ ಹಿಂಸೆ ನೀಡಲಾಗಿದೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.