ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012 ರ ಡಿಸೆಂಬರ್ನಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಇದೀಗ ಹೊಸ ಡೆತ್ ವಾರಂಟ್ ಜಾರಿಯಾಗಿದೆ.
ನಿರ್ಭಯಾ 'ಹತ್ಯಾಚಾರಿ'ಗಳಿಗೆ ಮಾರ್ಚ್ 20ರಂದು ಗಲ್ಲು... ಹೊಸ ಡೆತ್ ವಾರಂಟ್ ಜಾರಿ! - ನಿರ್ಭಯಾ ಹತ್ಯಾಚಾರಿಗಳಿಗೆ ಮಾರ್ಚ್ 20ರಂದು ಗಲ್ಲು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012 ರ ಡಿಸೆಂಬರ್ನಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಇದೀಗ ಹೊಸ ಡೆತ್ ವಾರಂಟ್ ಜಾರಿಯಾಗಿದೆ.
ಹೊಸ ಡೆತ್ ವಾರೆಂಟ್ ಜಾರಿ ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು, ಇದೀಗ ಮಾರ್ಚ್ 20ರ ಬೆಳಗ್ಗೆ 5:30ಕ್ಕೆ ಅವರಿಗೆ ಗಲ್ಲು ವಿಧಿಸುವಂತೆ ಕೋರ್ಟ್ ತಿಳಿಸಿದೆ.
ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹ್ಮದ್ ಮರಣದಂಡನೆಗೆ ಹೊಸ ದಿನಾಂಕ ನೀಡುವಂತೆ ಕೋರಿದ್ದರು. ಜತೆಗೆ ಈಗಾಗಲೇ ಅಪರಾಧಿಗಳು ತಮಗೆ ಲಭ್ಯವಿದ್ದ ಎಲ್ಲ ಕಾನೂನು ಮಾರ್ಗ ಬಳಕೆ ಮಾಡಿಕೊಂಡಿದ್ದಾಗಿ ಅವರು ತಿಳಿಸಿದ್ದರು. ಅಪರಾಧಿಗಳಿಗೆ ಯಾವುದೇ ಬಗೆಯ ಕಾನೂನಾತ್ಮಕ ಮಾರ್ಗಗಳು ಉಳಿದಿಲ್ಲ. ಹಾಗಾಗಿ , ದಯವಿಟ್ಟು ಇಂದು ಮರಣದಂಡನೆ ವಿಧಿಸಲು ಹೊಸ ದಿನಾಂಕವನ್ನು ನಿಗದಿಗೊಳಿಸಿ ಆದೇಶ ನೀಡಬೇಕು ಎಂದಿದ್ದರು. ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಗುಪ್ತಾ ಅವರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಕೋವಿಂದ್ ನಿನ್ನೆ ವಜಾಗೊಳಿಸಿದ್ದರು.