ನವದೆಹಲಿ:ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್, ಮರಣ ದಂಡನೆಯನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ಈ ಅರ್ಜಿಯಲ್ಲಿ ಯಾಕೆ ಅವರಿಗೆ ಮರಣದಂಡನೆ ನೀಡಬಾರದು ಎನ್ನುವುದನ್ನು ಸಮರ್ಥಿಸಿಕೊಳ್ಳಲು ನೀಡಿರುವ ಕುತೂಹಲಕಾರಿ ಉದಾಹರಣೆಗಳನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗದೇ ಇರದು.
ಅಕ್ಷಯ್ ಸಿಂಗ್ ಪರವಾಗಿ ಆತನ ವಕೀಲರು14 ಪುಟಗಳ ಅಪರಾಧ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದು, ಇದರಲ್ಲಿ ಹಿಂದೂ ಧಾರ್ಮಿಕ ಗ್ರಂಥಗಳು ಹಾಗೂ ದೆಹಲಿ ಮಾಲಿನ್ಯದ ಬಿಕ್ಕಟ್ಟನ್ನು ಉಲ್ಲೇಖಿಸಿ ಮರಣದಂಡನೆ ನೀಡದಂತೆ ಕೇಳಿಕೊಳ್ಳಲಾಗಿದೆ.
"ವಯಸ್ಸು ಕಡಿಮೆಯಾಗುತ್ತಿರುವಾಗ ಮರಣದಂಡನೆ ಏಕೆ... ನಮ್ಮ ವೇದ, ಪುರಾಣ ಮತ್ತು ಉಪನಿಷತ್ತುಗಳಲ್ಲಿ ಜನರು ಸಾವಿರ ವರ್ಷಗಳ ಕಾಲ ಬದುಕಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ಕಲಿಯುಗ. ಈ ಯುಗದಲ್ಲಿ ಮನುಷ್ಯರ ಜೀವಿತಾವಧಿ ಕಡಿಮೆಯಾಗುತ್ತಿದ್ದು, 50-60 ವರ್ಷಗಳಿಗೆ ಬಂದು ತಲುಪಿದೆ. ಜೀವನದ ಕಟು ವಾಸ್ತವತೆಗಳನ್ನು ಎದುರಿಸಿದ ವ್ಯಕ್ತಿಯು ಶವಕ್ಕಿಂತ ಕಡೆ" ಎಂದು ಅಕ್ಷಯ್ ಕುಮಾರ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.