ನವದೆಹಲಿ:ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಮುಖೇಶ್ ಕುಮಾರ್ ಸೇರಿದಂತೆ ನಾಲ್ವರಿಗೆ ಸುಪ್ರೀಂಕೋರ್ಟ್ ಮರಣ ದಂಡನೆ ವಿಧಿಸಿದೆ. ಆರೋಪಿಗಳಾದ ಮುಖೇಶ್ ಕುಮಾರ್ ಮತ್ತು ವಿನಯ್ ಶರ್ಮಾ ಅವರಿಂದ ಈಗಾಗಲೇ ಕ್ಯೂರೇಟಿವ (ಪರಿಹಾರಾತ್ಮಕ) ಅರ್ಜಿ ಸಲ್ಲಿಸಲಾಗಿತ್ತು.
ನಿರ್ಭಯಾ ಪ್ರಕರಣದ ಆರೋಪಿಯಿಂದ ಸುಪ್ರೀಂ ಕೋರ್ಟ್ಗೆ ಕೊನೆಯ ಅರ್ಜಿ ಮರಣ ದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಕಾನೂನು ರೀತಿ ಸಲ್ಲಿಸುವ ಕೊನೆಯ ಅರ್ಜಿ ಇದಾಗಿದೆ. ಈ ಅಂತಿಮ ನ್ಯಾಯದಾನದ ಈ ಅರ್ಜಿಯಲ್ಲಿ ಅರ್ಜಿದಾರರು,
ಅರ್ಜಿದಾರರ ಸಾಮಾಜಿಕ -ಆರ್ಥಿಕ ಸನ್ನಿವೇಶಗಳು, ಅನಾರೋಗ್ಯ ಪೀಡಿತ ಪೋಷಕರು ಸೇರಿದಂತೆ ಕುಟುಂಬ ಅವಲಂಬಿತರ ಸಂಖ್ಯೆ, ಜೈಲಿನಲ್ಲಿ ಉತ್ತಮ ನಡವಳಿಕೆ ಮತ್ತು ಸುಧಾರಣೆಯ ಸಂಭವನೀಯತೆಯನ್ನು ಸಮರ್ಪಕವಾಗಿ ಪರಿಗಣಿಸಲಾಗಿಲ್ಲ. ಇದು ನ್ಯಾಯದಾನಕ್ಕೆ ವಿರುದ್ಧವಾಗಿದೆ.
ನ್ಯಾಯಾಲಯ ನಮ್ಮ ವಿರುದ್ಧ ನೀಡಿರುವ ತೀರ್ಪು "ಸಮಾಜದ ಸಾಮೂಹಿಕ ಆತ್ಮಸಾಕ್ಷಿ" ಮತ್ತು "ಸಾರ್ವಜನಿಕ ಅಭಿಪ್ರಾಯ" ದಂತಹ ಅಂಶಗಳನ್ನು ಅವಲಂಬಿಸಿ ನೀಡಲಾದ ತೀರ್ಪಾಗಿದೆ.
ಸುಪ್ರೀಂಕೋರ್ಟ್ನ ತೀರ್ಪಿನ ಬಳಿಕವೂ ಮರಣದಂಡನೆಯ ಶಿಕ್ಷೆಯನ್ನ ಮರಣದಂಡನೆಯಾಗಿ ಪರಿವರ್ತಿಸಿರುವ ಉದಾಹರಣೆಗಳಿಗಾಗಿವೆ. ಈ ಎಲ್ಲ ಅಂಶಗಳನ್ನ ಪರಿಗಣಿಸಿ ತೀರ್ಪು ಮರುಪರಿಶೀಲನೆ ಮಾಡಿ ಅಂತಿಮ ನ್ಯಾಯದಾನ ನೀಡಬೇಕು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.