ಸ್ಟಾಕ್ಹೋಮ್ (ಸ್ವೀಡನ್):ವಿಮಾನ ದುರಂತವೊಂದರಲ್ಲಿ 9 ಜನ ಸ್ಕೈ ಡೈವರ್ಗಳು ಸಾವಿಗೀಡಾಗಿದ್ದಾರೆ. ಮೃತರೆಲ್ಲರೂ ಸ್ವೀಡನ್ ಪ್ರಜೆಗಳಾಗಿದ್ದಾರೆ. ಉತ್ತರ ಸ್ವೀಡನ್‌ನ ಉಮಿಯಾ ನಗರದ ಬಳಿ ಈ ಘಟನೆ ನಡೆದಿದೆ.
ವಿಮಾನ ದುರಂತವೊಂದರಲ್ಲಿ 9 ಜನ ಸ್ಕೈ ಡೈವರ್ಗಳು ಸಾವು - undefined
ಸ್ಕೈ ಡೈವರ್ಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವೂ ಉಮಿಯಾ ಏರ್ಪೋರ್ಟ್ನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಸಮೀಪದ ಐಸ್ಲ್ಯಾಂಡ್ ಒಂದರಲ್ಲಿ ಅಪಘಾತಕ್ಕೀಡಾಗಿದೆ
ಸ್ಕೈ ಡೈವರ್ಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವೂ ಉಮಿಯಾ ಏರ್ಪೋರ್ಟ್ನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಸಮೀಪದ ಐಸ್ಲ್ಯಾಂಡ್ ಒಂದರಲ್ಲಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದವರೆಲ್ಲರೂ ಸ್ವೀಡನ್ ಪ್ರಜೆಗಳಾಗಿದ್ದು, ಅದರಲ್ಲಿ ಓರ್ವ ದ್ವಿ ಪೌರತ್ವ ಹೊಂದಿದ್ದ. ದುರಂತದಲ್ಲಿ ಸಾವಿಗೀಡಾದವರ ಹೆಸರುಗಳು ಇನ್ನು ತಿಳಿದು ಬಂದಿಲ್ಲ ಎಂದು ಪೊಲೀಸ್ ವಕ್ತಾರ ಪೆಡರ್ ಜಾನ್ಸನ್ ಹೇಳಿದ್ದಾರೆ.
ದುರಂತದ ಬಗ್ಗೆ ಸ್ವೀಡನ್ ರಾಜ ಕಾರ್ಲ್ ಗುಸ್ತಾಫ್ ಅವರು ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಸ್ವೀಡನ್ ಪ್ರಧಾನಿ ಸ್ಟೀಫನ್ ಲೋಫ್ವೆನ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸರ್ಕಾರ ನಿಕಟ ಸಂಪರ್ಕದಲ್ಲಿದೆ ಎಂದಿದ್ದಾರೆ.