ಕರ್ನಾಟಕ

karnataka

ETV Bharat / bharat

ಶಬರಿಮಲೆ ದೇವಸ್ಥಾನ ಪ್ರವೇಶ ವಿಚಾರ: 9 ಜಡ್ಜ್​​ ಪೀಠದಿಂದ ಇಂದು ಪುನರ್​ಪರಿಶೀಲನೆ ಅರ್ಜಿ ವಿಚಾರಣೆ - ಶಬರಿಮಲೆ ದೇವಸ್ಥಾನ ಸುಪ್ರೀ ಕೋರ್ಟ್​ ತೀರ್ಪು

9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಐವರು ನ್ಯಾಯಮೂರ್ತಿಗಳು ನೀಡಿದ್ದ ತೀರ್ಪಿನ ಪುನರ್​ ಪರಿಶೀಲನಾ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಈ ಸಂಬಂಧದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಜನವರಿ 6 ರಂದು ಪ್ರಕರಣದ ವಿಚಾರಣೆ ಲಿಸ್ಟಿಂಗ್​ ಮಾಡುವಂತೆ ಸೂಚಿಸಿತ್ತು.

nine-judge-sc-bench-to-hear-sabarimala-temple-review-petitions-today
ಶಬರಿಮಲೆ ದೇವಸ್ಥಾನ ಪ್ರವೇಶ ವಿಚಾರ

By

Published : Jan 13, 2020, 10:20 AM IST

ನವದೆಹಲಿ: ಶಬರಿಮಲೈ ದೇವಸ್ಥಾನ ಪ್ರವೇಶ ವಿಚಾರ ಸಂಬಂಧ 2018ರ ಸುಪ್ರೀಂ ಕೋರ್ಟ್​ ನೀಡಿದ್ದ ತೀರ್ಪಿನ ಮರು ಪರಿಶೀಲನೆ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ಶಬರಿಮಲೆ ದೇವಸ್ಥಾನ ಪ್ರವೇಶ ವಿಚಾರ

9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಐವರು ನ್ಯಾಯಮೂರ್ತಿಗಳು ನೀಡಿದ್ದ ತೀರ್ಪಿನ ಪುನರ್​ ಪರಿಶೀಲನಾ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಈ ಸಂಬಂಧದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಜನವರಿ 6 ರಂದು ಪ್ರಕರಣದ ವಿಚಾರಣೆ ಲಿಸ್ಟಿಂಗ್​ ಮಾಡುವಂತೆ ಸೂಚಿಸಿತ್ತು.

ಇದಕ್ಕೂ ಮೊದಲು ಡಿಸೆಂಬರ್​ 13ರಂದು ಅರ್ಜಿ ವಿಚಾರಣೆ ಸಂಬಂಧ ಮಾತನಾಡಿ, 2018ರ ಶಬರಿಮಲೆ ದೇವಸ್ಥಾನ ವಿಚಾರದಲ್ಲಿ ನೀಡಿದ ತೀರ್ಪು ಅಂತಿಮವೇ ಎಂಬ ಬಗ್ಗೆ ತೀರ್ಮಾನವಾಗಿಲ್ಲ. ಈ ವಿಚಾರ 7 ಸದಸ್ಯರ ಪೀಠದ ಮುಂದೆ ಬಾಕಿ ಇದೆ ಎಂದು ಹೇಳಿತ್ತು.

ಇನ್ನು 2 ಇಬ್ಬರು ಮಹಿಳಾ ಕಾರ್ಯಕರ್ತೆಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಈ ಸಂಬಂಧ ಸಾಂವಿಧಾನಿಕ ಪೀಠ ರಚಿಸಿ ನಿರ್ಧರಿಸುವುದಾಗಿ ಹೇಳಿತ್ತು. ಅಲ್ಲದೇ ಅವರಿಗೆ ದೇವಸ್ಥಾನಕ್ಕೆ ಪ್ರವೇಶ ಮಾಡಲು ಸೂಕ್ತ ಭದ್ರತೆ ಒದಗಿಸುವಂತೆ ಸೂಚಿಸಿತ್ತು. ಆದರೆ, ಈ ಸಂಬಂಧ ಯಾವುದೇ ಆದೇಶ ನೀಡಲು ನಿರಾಕರಿಸಿತ್ತು. ದೇವಸ್ಥಾನದ ಆವರಣದಲ್ಲಿ ಹಿಂಸಾಚಾರಕ್ಕೆ ಅವಕಾಶ ಇಲ್ಲ ಎಂದೂ ಸಹ ಹೇಳಿತ್ತು.

ABOUT THE AUTHOR

...view details