ನವದೆಹಲಿ: ಅಂತಾರಾಷ್ಟ್ರೀಯ ಮತ್ತು ಪ್ಯಾನ್-ಇಂಡಿಯಾ ಡ್ರಗ್ ಜಾಲವೊಂದನ್ನು ಪತ್ತೆ ಹಚ್ಚಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ಐವರು ಭಾರತೀಯರು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿ₹1300 ಕೋಟಿ ರೂ. ಮೌಲ್ಯದ ಡ್ರಗ್ ವಶಪಡಿಸಿಕೊಂಡಿದೆ.
100 ಕೋಟಿ ರೂ.ಗಳ ಅಂತಾರಾಷ್ಟ್ರೀಯ ಮೌಲ್ಯ ಹೊಂದಿರುವ ಸುಮಾರು 20 ಕೆಜಿ ಕೊಕೇನ್‌ನ ಎನ್‌ಸಿಬಿ ವಶಪಡಿಸಿಕೊಂಡಿದೆ. ಹಾಗೂ ಆಸ್ಟ್ರೇಲಿಯಾದಲ್ಲಿ 55 ಕೆಜಿ ಕೊಕೇನ್ ಮತ್ತು 200 ಕೆಜಿ ಮೆಥಾಂಫಿಟಾಮೈನ್ ಸೇರಿ ಒಟ್ಟು ₹1300 ಕೋಟಿ ಅಂತಾರಾಷ್ಟ್ರೀಯ ಮೌಲ್ಯದ ಡ್ರಗ್ ವಶಪಡಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತರಲ್ಲಿ ಐವರು ಭಾರತೀಯರು, ಒಬ್ಬ ಅಮೆರಿಕನ್ ರಾಷ್ಟ್ರೀಯ, ಇಬ್ಬರು ನೈಜೀರಿಯಾ ಹಾಗೂ ಮತ್ತೊಬ್ಬ ಇಂಡೋನೇಷ್ಯಾ ಪ್ರಜೆ ಎಂದು ತಿಳಿದು ಬಂದಿದೆ. ಈ ಜಾಲವು ದೆಹಲಿ ಮತ್ತು ನೆರೆಯ ರಾಜ್ಯಗಳಾದ ಪಂಜಾಬ್, ಉತ್ತರಾಖಂಡ ಮತ್ತು ಮಹಾರಾಷ್ಟ್ರಗಳಲ್ಲಿ ಹರಡಿದ್ದು, ಆಸ್ಟ್ರೇಲಿಯಾ, ಕೆನಡಾ, ಯುಎಸ್ಎ, ಇಂಡೋನೇಷ್ಯಾ, ಶ್ರೀಲಂಕಾ, ಮಲೇಷ್ಯಾ ಮತ್ತು ನೈಜೀರಿಯಾ ದೇಶಗಳಲ್ಲೂ ಸಂಪರ್ಕ ಹೊಂದಿದೆ. ಜಾಲದ ಸಂಪರ್ಕಗಳನ್ನು ಕಂಡುಹಿಡಿಯಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
ಅಮೃತಸರ:ಪಂಜಾಬ್ನ ಅಮೃತಸರ ನಗರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು, ಆತನಿಂದ 1 ಕೆಜಿ ಹೆರಾಯಿನ್‌ನ ವಶಪಡಿಸಿಕೊಂಡಿದ್ದಾರೆ. ಅಮೃತಸರದ ಘಾರಿಂದದಲ್ಲಿ ಹರ್ಜೀತ್ ಸಿಂಗ್ ಎಂಬಾತನಿಂದ ಒಂದು ಕೆಜಿ ಹೆರಾಯಿನ್‌ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.