ಕರ್ನಾಟಕ

karnataka

ETV Bharat / bharat

ಕೊರೊನಾ ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಆರಂಭ - Nizam's Institute of Medical Science

ಐಸಿಎಂಆರ್ ನಿರ್ದೇಶನದ ಮೇರೆಗೆ ಹೈದರಾಬಾದ್‌ನ ನಿಮ್ಸ್‌ನ ಅಧಿಕಾರಿಗಳು ಕೋವಿಡ್​ -19ಗಾಗಿ ಭಾರತದ ಮೊದಲ ದೇಶೀಯ ಲಸಿಕೆಯ ಹಂತ -1 ಕ್ಲಿನಿಕಲ್ ಪ್ರಯೋಗಕ್ಕಾಗಿ ದಾಖಲಾತಿ ಪ್ರಾರಂಭಿಸಿದ್ದಾರೆ.

ಕ್ಲಿನಿಕಲ್ ಪ್ರಯೋಗ ನಿಮ್ಸ್​​ನಲ್ಲಿ ಆರಂಭ
ಕ್ಲಿನಿಕಲ್ ಪ್ರಯೋಗ ನಿಮ್ಸ್​​ನಲ್ಲಿ ಆರಂಭ

By

Published : Jul 7, 2020, 9:13 PM IST

ಹೈದರಾಬಾದ್:ಕೋವಿಡ್​-19ನ ಭಾರತದ ಮೊದಲ ಸ್ಥಳೀಯ ಲಸಿಕೆಯ ಮೊದಲ ಹಂತದ ಕ್ಲಿನಿಕಲ್​ ಪ್ರಯೋಗ ಮಂಗಳವಾರ ಇಲ್ಲಿನ ನಿಜಾಮ್​​ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಸ್) ಪ್ರಾರಂಭವಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಿರ್ದೇಶನದ ಮೇರೆಗೆ ನಿಮ್ಸ್​​ನ ಅಧಿಕಾರಿಗಳು ಪ್ರಯೋಗಕ್ಕಾಗಿ 30-60 ವ್ಯಕ್ತಿಗಳನ್ನು ನೋಂದಾಯಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.

ಮೊದಲಿಗೆ ವ್ಯಕ್ತಿಗಳ ರಕ್ತ ಮತ್ತು ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಅವರು ಸೂಕ್ತವೆನಿಸಿದರೆ ವಾರದ ನಂತರ ಲಸಿಕೆಯ ಮೊದಲ ಪ್ರಯೋಗ ಮಾಡಲಾಗುತ್ತದೆ. ಅವರ ರಕ್ತ ಮತ್ತು ಸ್ವ್ಯಾಬ್ ಮಾದರಿಗಳನ್ನು ನವದೆಹಲಿಯ ಐಸಿಎಂಆರ್ ಗೊತ್ತುಪಡಿಸಿದ ಲ್ಯಾಬ್‌ಗೆ ಕಳುಹಿಸಲಾಗುವುದು ಎಂದು ನಿಮ್ಸ್ ನಿರ್ದೇಶಕ ಡಾ. ಕೆ.ಮನೋಹರ್ ಸುದ್ದಿಗಾರರಿಗೆ ತಿಳಿಸಿದರು. ಪರೀಕ್ಷಾ ವರದಿಗಳನ್ನು ಸ್ವೀಕರಿಸಿದ ನಂತರ, ಔಷಧ ಇಲಾಖೆಯು ಅದನ್ನು ವಿಶ್ಲೇಷಿಸುತ್ತದೆ ಮತ್ತು ಫಿಟ್ನೆಸ್ ಪ್ರಮಾಣಪತ್ರಗಳನ್ನು ನೀಡುತ್ತದೆ.

ಲಸಿಕೆಯನ್ನು ಎರಡು ಪ್ರಮಾಣದಲ್ಲಿ ನೀಡಲಾಗುತ್ತದೆ. ಮೂರು ಮೈಕ್ರೊ ಗ್ರಾಂ ಮತ್ತು ಆರು ಮೈಕ್ರೋ ಗ್ರಾಂಗಳ ಎರಡು ಲಸಿಕೆ ಡೋಸೇಜ್ ಮತ್ತು ಪ್ಲಸೀಬೊ ಇರುತ್ತದೆ. ಪ್ರತಿಯೊಬ್ಬರಿಗೂ 14 ದಿನಗಳ ನಂತರ ಅದೇ ಲಸಿಕೆಯ ಎರಡನೇ ಪ್ರಮಾಣವನ್ನು ನೀಡಲಾಗುತ್ತದೆ.

ಲಸಿಕೆ ನೀಡಿದ ಎರಡು ದಿನಗಳವರೆಗೆ, ವೈದ್ಯರ ತಂಡವು ನಿಮ್ಸ್‌ನ ಐಸಿಸಿಯುನಲ್ಲಿ ಎರಡು ದಿನಗಳವರೆಗೆ ರೋಗಿಗಳ ಮೇಲ್ವಿಚಾರಣೆ ನಡೆಸಲಿದೆ. ನಂತರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ ಮತ್ತು ವೀಡಿಯೊ ಕಾನ್ಫರೆನ್ಸ್ ಅಥವಾ ಫೋನ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದರು.

ಹಂತ-1 ಕ್ಲಿನಿಕಲ್ ಪ್ರಯೋಗವು 28 ದಿನಗಳವರೆಗೆ ಮುಂದುವರೆಯುತ್ತದೆ. ನಂತರ ಐಸಿಎಂಆರ್ ಮತ್ತು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಹೆಚ್ಚಿನ ಜನರ ಮೇಲೆ ಎರಡನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡುತ್ತದೆ. ಹಂತ-1 ದೇಶಾದ್ಯಂತ ಸುಮಾರು 375 ಮಂದಿ ಮತ್ತು ಹಂತ-IIರಲ್ಲಿ 875 ಜನರ ಮೇಲೆ ಪ್ರಯೋಗ ನಡೆಸಲಾಗುತ್ತದೆ.

ಕೊವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗಗಳನ್ನು ಕೈಗೊಳ್ಳಲು ಐಸಿಎಂಆರ್ ಆಯ್ಕೆ ಮಾಡಿದ ಆಸ್ಪತ್ರೆಗಳಲ್ಲಿ ನಿಮ್ಸ್ ಒಂದಾಗಿದ್ದು, ಇದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್​ ನ್ಯಾಶನಲ್​​ ಲಿಮಿಟೆಡ್ (ಬಿಬಿಐಎಲ್) ಸಹಭಾಗಿತ್ವದಲ್ಲಿ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.

ABOUT THE AUTHOR

...view details